RemasterDirector_22abe5b5f 
ಜಿಲ್ಲೆ

ವರ್ತಿ ಹಾಡಿಗೆ ಚುನಾವಣಾಧಿಕಾರಿ, ತಹಸೀಲ್ದಾರ್ ಭೇಟಿ

ಪಿರಿಯಾಪಟ್ಟಣ: ತಾಲೂಕಿನ ವರ್ತಿ ಹಾಡಿಗೆ ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಹಾಗೂ ತಹಸೀಲ್ದಾರ್ ಸುರೇಂದ್ರಮೂರ್ತಿ ಶನಿವಾರ ಭೇಟಿ ನೀಡಿ ಹಾಡಿ ನಿವಾಸಿಗಳಿಗೆ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಿದರು.


ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಮಾತನಾಡಿ, ಮತದಾನದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಹಕ್ಕಾಗಿದ್ದು, ಚುನಾವಣೆಗಳನ್ನು ಹಬ್ಬದಂತೆ ಸಂಭ್ರಮಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದರು.


ತಹಸೀಲ್ದಾರ್ ಸುರೇಂದ್ರಮೂರ್ತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಮತದಾನ ದಿನ ನಿರ್ಲಕ್ಷ ಮಾಡದೆ ಕಡ್ಡಾಯ ಮತ ಚಲಾಯಿಸುವಂತೆ ತಿಳಿಸಿದರು.


ಚೌತಿ ಗ್ರಾಮ ಪಂಚಾಯಿತಿ ಪಿಡಿಒ ಮೋಹನ್ ಕುಮಾರ್ ಹಾಗೂ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳಾದ ನವೀನ್‌ರಾವ್, ದೀಪಕ್ ಹಾಗೂ ಹಾಡಿಯ ಮುಖಂಡರು ಹಾಜರಿದ್ದರು.