ಜಿಲ್ಲೆ

ನಿವೃತ್ತ ಸೈನಿಕರಿಗೆ ಸಿಗದ ಭೂಮಿ

ಕಾರವಾರ: ದೇಶ ರಕ್ಷಣೆಗಾಗಿ ಹೋರಾಡಿದ ನಿವೃತ್ತ ಸೈನಿಕರು ತಮ್ಮ ಸ್ವಂತ ಊರಿನಲ್ಲಿ ಜಮೀನಿಗಾಗಿಯೂ ಹೋರಾಡಬೇಕಾಗಿದೆ. ಜಿಲ್ಲೆಯ 207 ಕ್ಕೂ ಅಧಿಕ ಮಾಜಿ ಸೈನಿಕರು ಅರ್ಜಿ ಸಲ್ಲಿಸಿ ಸರ್ಕಾರ ಭೂಮಿ ನೀಡುತ್ತಿದೆ ಎಂದು ಹತ್ತಾರು ವರ್ಷಗಳಿಂದ ಕಾಯುತ್ತಿದ್ದಾರೆ.

ನಿವೃತ್ತ ಸೈನಿಕರಿಗೆ ಜಮೀನು ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಜಿಲ್ಲೆ ಸೇರಿ ರಾಜ್ಯದ ಎಲ್ಲ ತಾಲೂಕುಗಳ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ತನಿಖೆ ಆರಂಬಿಸಿದೆ. ಈಗ ಕಂದಾಯ ಅದಿಕಾರಿಗಳಿಗೆ ಬಿಸಿ ಮುಟ್ಟಿದೆ.

ದೇಶ ಸೇವೆ ಮಾಡಿ ಬಂದ ಸೂನಿಕರಿಗೆ ಗೌರವ ನೀಡುವ ಸಲುವಾಗಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ವಿವಿಧ ಸೌಲಭ್ಯಗಳನ್ನು ಒದಗಿಸುತ್ತವೆ. ನೌಕರಿಯಲ್ಲಿ ಮೀಸಲಾತಿ ನೀಡುತ್ತವೆ. ಕೃಷಿ ಮಾಡುವುದಿದ್ದಲ್ಲಿ ಕೃಷಿ ಜಮೀನು ಒದಗಿಸುತ್ತವೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 8 ರಂತೆ ಮಾಜಿ ಸೈನಿಕರಿಗೆ ಕೃಷಿ ಜಮೀನು ಮಂಜೂರು ಮಾಡಲು ಅವಕಾಶವಿದೆ. ಆದರೆ, ಈಗ ಸರ್ಕಾರಿ ಭೂಮಿಯ ಲಭ್ಯತೆ ಕಡಿಮೆಯಾಗುತ್ತಿರುವ ಕಾರಣ ಭೂಮಂಜೂರಾತಿ ಕಾಯ್ದೆಯ ಸೆಕ್ಷನ್ 8 ಕ್ಕೆ 2021 ರಲ್ಲಿ ತಿದ್ದುಪಡಿ ತಂದು ಪ್ರತಿ ಕಂದಾಯ ಗ್ರಾಮದಲ್ಲಿ ಲಭ್ಯವಿರುವ ಭೂಮಿಯಲ್ಲಿ ಶೇ.10 ರಷ್ಟನ್ನು ಮಾಜಿ ಸೈನಿಕರಿಗೆ ಮೀಸಲಿಡಲು ಅವಕಾಶ ಕಲ್ಪಿಸಲಾಗಿದೆ.

ಅಲ್ಲದೇ ಅವರಿಗೆ ಕೃಷಿ ಜಮೀನಿನ ಬದಲಾಗಿ ನಗರ ಭಾಗದಲ್ಲಾದರೆ ಗರಿಷ್ಠ 1200 ಚದರ ಅಡಿ, ಗ್ರಾಮೀಣ ಭಾಗದಲ್ಲಾದರೆ ಗರಿಷ್ಠ 2400 ಚದರ ಅಡಿಯಷ್ಟು ನಿವೇಶನವನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಸತಿ ಯೋಜನೆಯ ಜಾರಿಯ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಭೂಮಿಯನ್ನು ಮೀಸಲಿಡಲು ನಿಯಮ ರೂಪಿಸಲಾಗಿದೆ.

ಭ್ರಷ್ಟಾಚಾರ ತಪ್ಪಿಸುವ ಸಲುವಾಗಿ `ಲ್ಯಾಂಡ್ ಗ್ರಾಂಟ್ ಫಾರ್ ಎಕ್ಸ್ ಸರ್ವೀಸ್‌ಮೆನ್' ಎಂಬ ವೆಬ್ ಪೋರ್ಟಲ್ ಸಹ ರೂಪಿಸಲಾಗಿದೆ. ಆದರೆ, ಎಲ್ಲ ಕ್ರಮಗಳ ಹೊರತಾಗಿಯೂ ಸರ್ಕಾರಿ ಜಮೀನು ಮಂಜೂರಿಗೆ ಕಂದಾಯ ಅಽಕಾರಿಗಳು ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ. ಸೈನಿಕರು ಮಾತ್ರ ಕಚೇರಿಗಳಿಗೆ ಅಲೆಯುವ ದುಸ್ತಿತಿ ಇದೆ. ಇದನ್ನು ನೋಡಿ ಲೋಕಾಯುಕ್ತ ಈಗ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

160 ಅರ್ಜಿಗಳು ತಿರಸ್ಕೃತ

ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸ್ತುತ ಅಲ್ಲಲ್ಲಿ ಗುಂಟೆ ಲೆಕ್ಕದಲ್ಲಿ 82.6 ಎಕರೆ ಭೂಮಿ ಲಭ್ಯವಿದೆ. ಜಮೀನು ಮಂಜೂರಿಗಾಗಿ 409 ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರವಾರದಲ್ಲಿ 3 ಹಾಗೂ ಅಂಕೋಲಾ 1.38 ಎಕರೆ ಮಾತ್ರ ಮಂಜೂರು ಮಾಡಲಾಗಿದೆ. ಒಟ್ಟು 160 ಅರ್ಜಿಗಳನ್ನು ವಿವಿಧ ಕಾರಣ ನೀಡಿ ತಿರಸ್ಕಾರ ಮಾಡಲಾಗಿದೆ. ಇನ್ನು ಕೆಲವು ಅರ್ಜಿಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗಿದ್ದು, ವಿವಿಧ ಹಂತಗಳಲ್ಲಿ ಪರಿಶೀಲನೆಯಲ್ಲಿವೆ. ಒಟ್ಟಾರೆ 207 ಅರ್ಜಿಗಳಿಗೆ ಜಮೀನು ನೀಡಿಕೆ ಬಾಕಿ ಇದೆ. ಸೂಕ್ತ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣಕ್ಕೆ ಹಲವು ಅರ್ಜಿತಗಳನ್ನು ತಿರಸ್ಕರಿಸಲಾಗಿರುವುದು ಕಂಡುಬAದಿದೆ.

ಭೂಮಿ ಒತ್ತುವರಿ

ಕರ್ನಾಟಕ ಭೂ ಕಂದಾಯ ಕಾಯ್ದೆಯಂತೆ ಪ್ರತಿ ವರ್ಷ ಸರ್ಕಾರಿ ಬಳಕೆಗೆ ಲಭ್ಯವಿರುವ ಭೂಮಿಯನ್ನು ಸಂಬAಧಪಟ್ಟ ಕಂದಾಯ ಅಽಕಾರಿಗಳು ಘೋಷಣೆ ಮಾಡಬೇಕು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹೆಚ್ಚಿರುವುದರಿಂದ ಇಲ್ಲಿ ಜಮೀನಿನ ಲಭ್ಯತೆ ಇಲ್ಲ. ಸರ್ಕಾರಿ ಕಟ್ಟಡಗಳಿಗೇ ಜಮೀನು ಸಿಗುತ್ತಿಲ್ಲ. ಇದರಿಂದ ಲಭ್ಯವಿರುವ ಜಮೀನು ಘೋಷಣೆ ಮಾಡದೆಯೇ 30 ವರ್ಷ ಕಳೆದು ಹೋಗಿದೆ. ಇನ್ನು ಕೆಲವೆಡೆ ಮಾಜಿ ಸೈನಿಕರಿಗಾಗಿ ಮೀಸಲಿಟ್ಟ ಭೂಮಿ ಒತ್ತುವರಿಯೂ ಆಗಿದೆ. ಹಾಗಾಗಿ ಮಾಜಿ ಸೈನಿಕರಿಗೆ ಜಮೀನು ಮಂಜೂರಿ ಸಾಧ್ಯವಾಗುತ್ತಿಲ್ಲ. ಗುಂಟೆ ಲೆಕ್ಕದಲ್ಲಿ ಅಲ್ಲಲ್ಲಿ ಜಮೀನು ಲಭ್ಯವಿದ್ದರೂ ಅದನ್ನು ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರವರು.

ಎಷ್ಟು ಅರ್ಜಿಗಳು ಬಾಕಿ ತಾಲೂಕು ಬಾಕಿ ಅರ್ಜಿಗಳು

  • ಕಾರವಾರ 43
  • ಅಂಕೋಲಾ 31
  • ಕುಮಟಾ 37
  • ಹೊನ್ನಾವರ 06
  • ಭಟ್ಕಳ 11
  • ಶಿರಸಿ 12
  • ಸಿದ್ದಾಪುರ 03
  • ಯಲ್ಲಾಪುರ 00
  • ಮುಂಡಗೋಡ 49
  • ಹಳಿಯಾಳ 00
  • ದಾಂಡೇಲಿ 05
  • ಜೊಯಿಡಾ 10
ಲೋಕಾಯುಕ್ತ ಎಸ್‌ಪಿ, ಉತ್ತರ ಕನ್ನಡಕುಮಾರ ಚಂದ್ರ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲೇ ಕಂದಾಯ ಅಽಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಬAಧಪಟ್ಟ ಅಽಕಾರಿಗಳಿಗೆ ನೋಟಿಸ್ ನೀಡಿದ್ದು, ಮಾನ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿಯೇ ವಿಚಾರಣೆ ನಡೆಯಲಿದೆ.