shikshakarige sanmana 
ಜಿಲ್ಲೆ

ಸರ್ಕಾರಿ ನಿವೃತ್ತ ನೌಕರರ ಸಂಘ ಸಭೆ, ಶಿಕ್ಷಕರ ದಿನ ಆಚರಣೆ

ಕುಂದಾಪುರ: ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನ ಸಭಾಭವನದಲ್ಲಿ ಶನಿವಾರ ನಡೆದ ಕುಂದಾಪುರ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಕರಾದ ಎ.ಚಂದ್ರಶೇಖರ್ ಶೆಟ್ಟಿ, ಮಹಾಬಲ ಶೆಟ್ಟಿಗಾರ್, ಜಿ.ಗಣಪಯ್ಯ, ರಾಜೀವ ಶೆಟ್ಟಿ, ಶೇಖರ್ ಶೆಟ್ಟಿ, ಸಂಜೀವ ಶೆಟ್ಟಿ, ರಾಮಯ್ಯ ಹೆಬ್ಬಾರ್ ಅವರನ್ನು ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ ಸನ್ಮಾನಿಸಿದರು.

ನೂತನ ಸದಸ್ಯರಾದ ಎಸ್.ಮಂಜುನಾಥ ಗಾಣಿಗ, ಅಮಿತಾ ಬಿ., ಆರೋಗ್ಯ ಇಲಾಖೆಯ ನಿವೃತ್ತ ನೌಕರ ರಾಮ ಎಚ್. ಅವರನ್ನು ಸ್ವಾಗತಿಸಲಾಯಿತು.

ಗೌರವ ಅಧ್ಯಕ್ಷ ವಕ್ವಾಡಿ ಭಾಸ್ಕರ್ ಶೆಟ್ಟಿ, ಗೌರವ ಸಲಹೆಗಾರ ದಿನಕರ ಶೆಟ್ಟಿ, ಉಪಾಧ್ಯಕ್ಷ ಎ.ಮುತ್ತಯ್ಯ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ವಿಜಯಕರ ಶೆಟ್ಟಿ, ಮಾಜಿ ಅಧ್ಯಕ್ಷ ಬಿ.ಭೋಜರಾಜ ಶೆಟ್ಟಿ, ಸಿ.ಎಚ್.ಜಗನ್ನಾಥ ಶೆಟ್ಟಿ, ಸಾವಿತ್ರಿ ಕೆ., ಯಶೋದಾ ಶೆಟ್ಟಿ, ಸೂರ್ಯಕಾಂತಿ, ರಾಮಚಂದ್ರ ಉಪಾಧ್ಯ, ಅಶೋಕ್‌ಕುಮಾರ್, ಕೆ.ಸಂಜೀವ ಶೆಟ್ಟಿ ಉಪಸ್ಥಿತರಿದ್ದರು. ವಿ.ಎಸ್.ಸಂಜೀವಿಕುಮಾರಿ ಪ್ರಾರ್ಥಿಸಿದರು. ರಾಮಚಂದ್ರ ಉಪಾಧ್ಯ ನಿರೂಪಿಸಿದರು. ರುಘುವೀರ ಕೆ. ವಂದಿಸಿದರು.