ಚಿತ್ರದುರ್ಗ: ತಮ್ಮ ವಿರುದ್ಧ ಕಮಿಷನ್ ಆರೋಪ ಹೊರೆಸಿರುವ ನೆಲಮಂಗಲ ಶ್ರೀ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪು ರಿ ಸ್ವಾಮೀಜಿ ಸವಾಲು ಸ್ವೀಕರಿಸಿ,ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ,ಹಿಂದುಳಿದ ವರ್ಗಗಳ ಕ ಲ್ಯಾಣ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರದೊಂದಿಗೆ ಮಾತನಾಡಿ,ಸ್ವಾಮೀಜಿ ಕಮಿಷನ್ ಕೇಳಿದ್ದಕ್ಕೆ ಸಾಕ್ಷ್ಯ ಕೊಡಲಿ,ಆರೋಪ ಸಾಬೀತಾದರೆ ರಾಜೀನಾಮೆ ಯಾಕೆ?ರಾಜಕೀಯದಿಂದಲೇ ನಾನು ನಿವೃತ್ತಿ ಹೊಂದುತ್ತೇನೆ.ಬಹಿರಂಗ ಚರ್ಚೆಗೆ ದಿನಾಂಕ,ಸಮಯ ನಿಗದಿ ಮಾಡಲಿ.
ಬಸವರಾಜ ಬೊಮ್ಮಾಯಿ ಸರ್ಕಾರ ಗಾಣಿಗರ ಗುರುಪೀಠಕ್ಕೆ ಮಂಜೂರು ಮಾಡಿದ್ದ 3.5 ಕೋಟಿ ರೂ.ಅನುದಾನದಲ್ಲಿ 1.50 ಕೋಟಿ ರೂ.ಅವರೇ ಕಡಿತಗೊಳಿಸಿದ್ದರು. ಅವರ ಅವಧಿಯಲ್ಲೇ 2 ಕೋಟಿ ರೂ.ಅನುದಾನವೂ ಬಿಡುಗಡೆಯಾಗಿದೆ. ಬೊಮ್ಮಾಯಿ ಸೂಚನೆ ಉ ಲ್ಲೇಖಿಸಿ ಹೊರಡಿಸಿದ್ದ ಆರ್ಥಿಕ ಇಲಾಖೆ ಆದೇಶ ಮರೆಮಾಚಿ,ನಮ್ಮ ಸರ್ಕಾರದ ವಿರುದ್ಧ ಸ್ವಾಮೀಜಿ 3.50 ಕೋಟಿ ರೂ.ಕೊಟ್ಟಿಲ್ಲವೆಂದು ಕೋರ್ಟ್‌ಗೆ ಹೋಗಿದ್ದಾರೆ.
2 ಕೋಟಿ ರೂ.ಬಿಡುಗಡೆ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಲಾಗುವುದು. ಈಗಾಗಲೇ ಪೀಠಕ್ಕೆ ಈ ಹಿಂದೆ 5 ಮತ್ತು 2 ಕೋಟಿ ರೂ. ಸಹಿತ 7 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಸಲ್ಲದ ಆರೋಪ ಮಾಡಿರುವ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂ ಡುತ್ತೇನೆ. ಆರೋಪ ಸಾಬೀತಾದ್ರೆ ರಾಜಕಾರಣ ತೊರೆಯುತ್ತೇನೆ,ಅವರು ಪೀಠ ತ್ಯಜಿಸುತ್ತಾರೆಯೇ?ಕಾವಿ ಬಟ್ಟೆ ಧರಿಸಿ ವೃಥಾ ಆರೋಪಿ ಸಬಾರದು. ಅವರಿನ್ನೂ ಬಿಜೆಪಿ ಎಂಎಲ್‌ಸಿ,ಮಾಜಿ ಮಂತ್ರಿ ಮೂಡ್‌ನಲ್ಲಿದ್ದಾರೆ. ಪೀಠಕ್ಕೆ ಗೌರವಿದೆ,ಸ್ವಾಮಿಗಳನ್ನು ಗೌರವಿಸುತ್ತೇನೆ. ಕಾವಿ ಕಳಚಿದರೆ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಎಂದರು.
388 ಕೋಟಿ ರೂ.ಅನುದಾನ
ಬಿಜೆಪಿ ಸರ್ಕಾರದ ಅವಧಿ ವಿವಿಧ ಮಠಮಾನ್ಯಗಳು,ಸಂಘ-ಸಂಸ್ಥೆಗಳಿಗೆ 388 ಕೋಟಿ ರೂ.ಅನುದಾನ ಘೋಷಿಸಿ ಯಾಮಾರಿಸಲಾ ಗಿದೆ. ಅನುದಾನ ಘೋಷಣೆಗೆ ಕನಿಷ್ಠ ಶೇ.25 ಪ್ರಮಾಣದಲ್ಲಿ ಗ್ರಾೃಂಟ್ ಇಟ್ಟಿರಬೇಕು. ನಿಯಮ ಪಾಲಿಸದೆ ಕನಿಷ್ಠ 5 ಕೋಟಿ ರೂ.ಇರಲಿ, 10 ರೂ.ಇಡದೆಯೇ 10 ನಿಗಮಗಳನ್ನೂ ಸ್ಥಾಪಿಸಲಾಗಿದೆ ಎಂದು ಸಚಿವರು ಬಿಜೆಪಿ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯರು ಒಂದಿಷ್ಟು ಆರ್ಥಿಕ ಶಿಸ್ತನ್ನು ನನಗೆ ಹೇಳಿಕೊಟ್ಟಿದ್ದಾರೆ. ನಾನು ಸಚಿವನಾದ ಮೇ ಲೆ 5 ಕೋಟಿ ರೂ.ಅನುದಾನ ಕಾಯ್ದಿರಿಸಿ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ನೋಂದಣಿ ಮಾಡಿಸಿದ್ದೇನೆ. ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುವುದಿಲ್ಲವೆಂದರು.
ಸಿಎಂ ಮೊದಲಿಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಯಾವುದೇ ಕಾರಣಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮ ತ್ತೊಂದು ಇಲಾಖೆಯಲ್ಲಿ ಸೇರ್ಪಡೆ ಮಾಡುವುದಿಲ್ಲ. ನಮ್ಮ ಇಲಾಖೆ ಶಕ್ತಿಯುತವಾಗಿದ್ದು,ಹೊರಗುತ್ತಿಗೆಯಡಿ ಅಗತ್ಯ ಸಿಬ್ಬಂದಿ ನೇಮಿಸ ಲಾಗುವುದು. ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಕಾವೇರಿ ಆರತಿ ನಡೆಸಲಾಗುವುದು ಹಾಗೂ 33 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.