ಜಿಲ್ಲೆ

ನಿವೃತ್ತ ಡಿವೈಎಸ್ಪಿ ಚನ್ನಣ್ಣಗೌಡ ಮಾಲಿಪಾಟೀಲ್ ಇನ್ನಿಲ್ಲ

ಬಾಬುರಾವ ಯಡ್ರಾಮಿ


ಕಲಬುರಗಿ: ನಿವೃತ್ತ ಡಿವೈಎಸ್‌ಪಿ ಹಾಗೂ ಸಮಾಜ ಸೇವಕರಾಗಿದ್ದ ಯಾದಗಿರಿಯ ಚನ್ನಣ್ಣಗೌಡ ಮಾಲಿಪಾಟೀಲ್ (೯೪) ಶುಕ್ರವಾರ ಸಂಜೆ ಬೀದರ್‌ನಲ್ಲಿ ನಿಧನ ಹೊಂದಿದರು. ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ, ವೀರಶೈವ ಮಹಾಸಭಾ ರಾಷ್ಟಿçÃಯ ಕೈಗಾರಿಕೆ ಮತ್ತು ವಾಣಿಜ್ಯ ಸಮಿತಿ ಗೌರವಾಧ್ಯಕ್ಷ ಅಮರನಾಥ ಸಿ.ಪಾಟೀಲ್ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರ ಮಧ್ಯಾಹ್ನ ೩ಕ್ಕೆ ಯಾದಗಿರಿ ಹೊರವಲಯದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.