ಜಿಲ್ಲೆ

ಸಮಾಜಮುಖಿ ಕಥಾಪುರಸ್ಕಾರ ಫಲಿತಾಂಶ ಪ್ರಕಟ

ಬೆಂಗಳೂರು: ಸಮಾಜಮುಖಿ ಪ್ರಕಾಶನವು 2024ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದ್ದು, ನಾಡಿನ ಐವರು ಕಥಾಗಾರರ ಕತೆಗಳನ್ನು ಆಯ್ಕೆ ಮಾಡಲಾಗಿದೆ.

ಕಥಾ ಪುರಸ್ಕಾರಕ್ಕೆ ವೀರೇಶ ಶಿವಲಿಂಗಪ್ಪ ಸಜ್ಜನ ಅವರ ‘ಕ್ಯಾನವಾಸ್’, ಹಳೇಮನೆ ರಾಜಶೇಖರ ಅವರ ‘ದೇವರ ತುಪ್ಪ’, ಟಿ.ಆರ್.ಉಷಾರಾಣಿ ಅವರ ‘ಕಾಲವೆಂಬ ಕಬಂಧ ಬಾಹು’, ಡಾ. ನಾಗರಾಜ ಕೋರಿ ಅವರ ‘ಶಕುನದ ಚುಕ್ಕಿ’ ಹಾಗೂ ಫೌಜಿಯಾ ಸಲೀಂ ಅವರ ‘ಬಯಾಲಾಜಿಕಲ್ ಫಾದರ್’ ಕಥೆಗಳು ಆಯ್ಕೆಯಾಗಿವೆ. ಈ ಕಥಾಗಾರರಿಗೆ ತಲಾ 5 ಸಾವಿರ ರೂ. ನಗದು ಪುರಸ್ಕಾರ ಪಡೆಯಲಿದ್ದಾರೆ.

ಇದೇ ರೀತಿ ವಾರ್ಷಿಕ ಕಥಾ ಸಂಕಲನಕ್ಕೆ ಸಂಪತ್ ಸಿರಿಮನೆ, ಜಿ.ಪ್ರವೀಣ್‌ಕುಮಾರ್, ಪೂರ್ಣಿಮಾ ಭಟ್ಟ ಸಣ್ಣಕೇರಿ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಅಂದಯ್ಯ ಅರವಟಗಿಮಠ, ಹೇಮಂತ್ ಲಿಂಗಪ್ಪ, ಜಹಾನ್ ಅರಾ ಕೋಳೂರು, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಜಯದೇವಿ ಗಾಯಕವಾಡ, ಅಮರೇಶ ಗಿಣಿವಾರ ಅವರ ಕತೆಗಳು ಆಯ್ಕೆಯಾಗಿವೆ.

ಸ್ಪರ್ಧೆಯಲ್ಲಿ ಒಟ್ಟು 241 ಕಥೆಗಾರರು ಭಾಗವಹಿಸಿದ್ದು. ಲೇಖಕ ರಂಗನಾಥ ಕಂಟನಕುಂಟೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಶೀಘ್ರವೇ ಆಯ್ಕೆಯಾದವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಾಜಮುಖಿ ಪ್ರಕಾಶನದ ಚಂದ್ರಕಾತ ವಡ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.