ಜಿಲ್ಲೆ

ಫಲಿತಾಂಶ ಸುಧಾರಣೆಗೆ ಯೋಜನೆ ಅನುಷ್ಠಾನ

ಪ್ರಶಾಂತ ಹೂಗಾರ

ಚಿಕ್ಕೋಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ಹಲವು ಯೋಜನೆ ಅನುಷ್ಠಾನಗೊಳಿಸಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಸೀತಾರಾಮ ಹೇಳಿದರು.

ಪಟ್ಟಣದ ಆರ್.ಡಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಗುರುವಾರ ಹಮ್ಮಿಕೊಂಡಿದ್ದ ಯಶಸ್ವಿಭವ ಹಾಗೂ ವಿಷಯದ ಕುರಿತು ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಲಿತಾಂಶ ಸುಧಾರಣೆಗೆ ಇಲಾಖೆ ಪ್ರಯತ್ನ ಮಾಡುತ್ತಿದೆ. ಕಾರ್ಯಾಗಾರದಲ್ಲಿ ವಿಶೇಷ ಬೋಧನೆ, ದತ್ತು ಯೋಜನೆ, ಶಿಕ್ಷಕರಿಂದ ಮನೆ ಭೇಟಿ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರೊಟ್ಟಿಗೆ ಆರ್.ಡಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವು ಸಂಪನ್ಮೂಲ ಶಿಕ್ಷಕರಿಂದ ಮೂರುದಿನ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದರು.

ಕಾರ್ಯಾಗಾರದಲ್ಲಿ ಕನ್ನಡ ವಿಭಾಗದಲ್ಲಿ ಗಣಿತ ವಿಷಯದ ಕುರಿತು ಅಲಗೌಡ ಸೊಲ್ಲಾಪುರೆ, ವಿಜ್ಞಾನದಲ್ಲಿ ಮಹೇಶ ಜೈನಾಪುರೆ, ಇಂಗ್ಲೀಷನಲ್ಲಿ ಮಹೇಶ ಮಗದುಮ್ಮ, ಸಮಾಜ ವಿಜ್ಞಾನದಲ್ಲಿ ಬಿ.ಎಸ್.ಕಮತೆ, ಪ್ರಶ್ನೆ ಪತ್ರಿಕೆ ಸ್ವರೂಪ, ನೀಲ ನಕ್ಷೆ, ಹೆಚ್ಚು ಅಂಕ ಒಳಗೊಂಡಿರುವ ಪಾಠಗಳು, ಅಭ್ಯಾಸ ಮಾಡುವ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು.

ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಿ.ಎಸ್.ಅನಗಳ, ಎ.ಡಿ.ಅಕ್ಕಿವಾಟೆ, ಕೆ.ಕೆ. ಪಾಟೀಲ, ಎಂ.ಬಿ. ಕೇರೂರೆ, ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಇಮ್ರಾನ್ ಪಟೇಲ, ಎಂ.ಬಿ. ಜಮಾದಾರ, ಎಸ್.ಎಸ್.ಬಂಕಾಪುರ, ಜಿ.ಡಿ. ಪಿರಪ್ಪಗೋಳ ಹಾಗೂ ಇಂಗ್ಲೀಷ ಮಾಧ್ಯಮದ ವಿದ್ಯಾರ್ಥಿಗಳಿಗೆ ಅಂಜಿಲಿನ್ ಉದೋಜಿ, ದೀಪಾ ಕಾಂಬಳೆ, ಅಜಿತ್ ಭೊಜೆ, ನಾಗರಾಜ ಮಾರ್ಗದರ್ಶನ ನೀಡುವರು ಎಂದರು.