ಜಿಲ್ಲೆ

ರೈತರ ಸಮಸ್ಯೆಗೆ ಸ್ಪಂದಿಸುವುದು ಆದ್ಯ ಕರ್ತವ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ರೈತರ ಹೊಲಗಳಿಗೆ ಸಾರ್ವಕಾಲಿಕ ರಸ್ತೆ ನಿರ್ಮಿಸುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಬೈಲೂರ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ರೈತರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮದಲ್ಲಿ ಉತ್ತಮ ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವದ್ಧಿ ಕಾಮಗಾರಿಗಳು ಶೀಘ್ರದಲ್ಲಿಯೇ ಪ್ರಾರಂಭವಾಗಲಿವೆ ಎಂದರು.

ಗ್ರಾಪಂ ಸದಸ್ಯ ಬಸವರಾಜ ಲದ್ದಿಮಠ ಮಾತನಾಡಿದರು. ಕಾಂಗ್ರೆಸ್ ಯುವ ಮುಖಂಡ ಮಯೂರ ಗಿರಿಯಾಲ, ಎಪಿಎಂಸಿ ಮಾಜಿ ಸದಸ್ಯ ದುಂಡಪ್ಪ ಕ್ಯಾಸಗೇರಿ ಮಾತನಾಡಿದರು. ಶಿವಾಜಿ ಶಿಂಧೆ, ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ, ವಿಜಯ ಅಂಕಲಗಿಮಠ, ಮಹಾಂತೇಶ ಇಟಗಿ, ಸುರೇಶ ತಿಗಡಿ, ನಿಜಗುಣಿ ಬಾಗೇವಾಡಿ, ಬಸವರಾಜ ತಿಗಡಿ, ಮಂಜುನಾಥ ಗೆಜಪತಿ, ರಾಚಯ್ಯ ಕೆಂಜಡಿಮಠ, ಈರಪ್ಪ ಶಿಂದೊಳ್ಳಿ ಹಾಗೂ ಗ್ರಾಮಸ್ಥರು ಇದ್ದರು.