ಸಿರಗುಪ್ಪ ಎಸ್.ಇ.ಎಸ್ ಐಟಿಐ ಕಾಲೇಜು ಆವರಣದಲ್ಲಿ ತಂಬಾಕು ವಿರೋಧಿ ದಿನವನ್ನು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್ ಉದ್ಘಾಟಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ, ಉಪಾಧ್ಯಕ್ಷ ಷರೀಫ್ ಸಾಬ್, ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ, ಟಿಎಚ್‌ಒ ದಮ್ಮೂರು ಬಸವರಾಜ, ಅಬಕಾರಿ ವೃತ್ತ ನಿರೀಕ್ಷಕಿ ಕೀರ್ತನಾ ಟಿ.ಆರ್ ಇತರರಿದ್ದರು. 
ಜಿಲ್ಲೆ

ಹೆಚ್ಚಲಿದೆ ಉಸಿರಾಟ-ಹೃದಯ ತೊಂದರೆ

ಸಿರಗುಪ್ಪ: ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್ ಹೇಳಿದರು.

ಪಟ್ಟಣದ ಎಸ್.ಇ.ಎಸ್ ಐಟಿಐ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಬಕಾರಿ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆ ಧೂಮಪಾನಿಗಳಿಗೆ ಹಾನಿ ಮಾಡುವುದಲ್ಲದೆ, ಅವರ ಸುತ್ತಮುತ್ತಲಿನವರಿಗೂ ಹಾನಿ ಉಂಟುಮಾಡುತ್ತದೆ. ಧೂಮಪಾನಿಗಳು ಬಿಡುವ ಹೊಗೆಗೆ ನಿಯಮಿತವಾಗಿ ಒಡ್ಡಿಕೊಳ್ಳುವ ಮಕ್ಕಳು ಮತ್ತು ವಯಸ್ಕರು ಉಸಿರಾಟದ ಕಾಯಿಲೆ ಮತ್ತು ಹೃದಯರಕ್ತನಾಳದ ಕಾಯಿಲೆಗೆ ಒಳಗಾಗುತ್ತಾರೆ. ತಂಬಾಕು ಬಳಕೆಯನ್ನು ತಡೆಯಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳಾಗಿವೆ. ತಂಬಾಕು ಜಾಹೀರಾತನ್ನು ನಿಬರ್ಂಧಿಸುವ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದಲ್ಲಿ ತಂಬಾಕು ಬಳಕೆ ಕಡಿಮೆ ಮಾಡಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸೀಂ, ಪ್ರಾಚಾರ್ಯ ರಾಘವೇಂದ್ರ ಜೋಶಿ ಮತ್ತಿತರರಿದ್ದರು.