ವಿಜಯಪುರ ನಗರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ವಿಜಯಪುರ ಜಿಲ್ಲೆ ಬ್ರಾಹ್ಮಣ ಮಹಿಳಾ ಮಂಡಳಿ ಹಾಗೂ ಸಮಸ್ತ ವಿಜಯಪುರ ಜಿಲ್ಲೆಯ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಪಂ. ಮಧ್ವಾಚಾರ್ಯ ಮೊಖಾಶಿ, ಪಂ. ಪ್ರಸನ್ನ ಆಚಾರ್ಯಕಟ್ಟಿ, ವಸಂತ ನಾಡಜೋಶಿ, ಕೃಷ್ಣ ಗುರೂಜಿ, ಸಂಘದ ಅಧ್ಯಕ್ಷೆ ಭಾಗ್ಯಶ್ರೀ ಕಟ್ಟಿ, ರಾಘವ ಅಣ್ಣಿಗೇರಿ, ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಭಾಗ್ಯಶ್ರೀ ಶಿವಾನಂದ ಪಾಟೀಲ ಇತರರಿದ್ದರು. 
ಜಿಲ್ಲೆ

ಮಹಿಳೆಯರನ್ನು ಗೌರವಿಸುವುದು ಆದ್ಯ ಕರ್ತವ್ಯ

ವಿಜಯಪುರ: ತಾಳ್ಮೆ, ತ್ಯಾಗ, ಜಾಣ್ಮೆ, ಏಕಾಗ್ರತೆ ಮುಂತಾದವುಗಳ ಮೂಲಕ ತನ್ನ ಜೀವನದಲ್ಲಿ ಬರುವ ಸಂಕಟವನ್ನೆಲ್ಲಾ ತೋರ್ಪಡಿಸದೆ ಕುಟುಂಬದ ಏಳಿಗೆಗೆ ಸದಾ ದುಡಿಯುತ್ತಾ, ಸಾಧಕ ಮಹಿಳೆಯರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಪಂ. ಮಧ್ವಾಚಾರ್ಯ ಮೊಖಾಶಿ ಹೇಳಿದರು.

ವಿಜಯಪುರ ಜಿಲ್ಲೆ ಬ್ರಾಹ್ಮಣ ಮಹಿಳಾ ಮಂಡಳಿ ಹಾಗೂ ಸಮಸ್ತ ವಿಜಯಪುರ ಜಿಲ್ಲೆಯ ಮಹಿಳಾ ಘಟಕದ ವತಿಯಿಂದ ಬುಧವಾರ ಸಂಜೆ ನಗರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭೂಮಿಯನ್ನು ನಾವು ತಾಯಿ ರೂಪದಲ್ಲಿ ಕಾಣುತ್ತೇವೆ. ಅದಕ್ಕೆ ನಮ್ಮ ದೇಶವನ್ನು ‘ಬೊಲೋ ಭಾರತ ಮಾತಾ ಕಿ ಜೈ’ ಎಂಬ ಉದ್ಘೋಷವನ್ನು ಗರ್ವದಿಂದ ಹೇಳುತ್ತೇವೆ ಎಂದರು.

ಕನ್ನೂರು ಶ್ರೀಮಠದ ಸಾಧಕರಾದ ಕೃಷ್ಣ ಗುರೂಜಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಮಹಿಳೆಯರು ಪುರುಷನ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಹೆಣ್ಣು ಬಾಳಿನ ಕಣ್ಣಾಗಿದ್ದು, ಪ್ರತಿ ಪುರುಷನ ಜೀವನದಲ್ಲಿ ತಾಯಿ, ಸಹೋದರಿ, ಮಡದಿ ಮುಂತಾದ ಪಾತ್ರದಲ್ಲಿ ಬೆನ್ನುಲುಬಾಗಿ ಆತನ ಯಶಸ್ಸಿಗೆ ಕಾರಣೀಭೂತಳಾಗಿದ್ದಾಳೆ ಎಂದರು.

ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಗೆ ಅವರ ತಾಯಿ ಜೀಜಾಬಾಯಿ ನೀಡಿದ ಸಂಸ್ಕಾರವೇ ಕಾರಣ. ಪುರುಷ ಏನನ್ನಾದರೂ ಸಾಧಿಸಬೇಕಾದರೆ ಅವರ ಹಿಂದೆ ಮಹಿಳೆಯ ಪಾತ್ರ ಬಹಳ ವಿಶೇಷ ಎಂದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ವಸಂತ ನಾಡಜೋಶಿ ಮಾತನಾಡಿ, ಮಂಡಳಿಯ ವತಿಯಿಂದ ಮಹಿಳೆಯರಿಗಿರುವ ಸೌಲಭ್ಯಗಳ ಸ್ಥೂಲ ಚಿತ್ರಣ ನೀಡಿದರು. ಸಂಘದ ಅಧ್ಯಕ್ಷೆ ಭಾಗ್ಯಶ್ರೀ ಕಟ್ಟಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.

ಪಂ. ಪ್ರಸನ್ನ ಆಚಾರ್ಯಕಟ್ಟಿ, ಶ್ರೀ ಹರಿ ಗೊಳಸಂಗಿ, ಶಾಂತಾಬಾಯಿ ಕೌತಾಳ, ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಭಾಗ್ಯಶ್ರೀ ಶಿವಾನಂದ ಪಾಟೀಲ, ಮಂಗಳಾ ಪಾಟೀಲ, ಅನಿತಾ ಪದಕಿ, ಜಯಶ್ರೀ ಕನ್ನೂರ, ಚೈತ್ರ ಗೋಟೆಕರ್, ಗಲಗಲಿ ಜಯಶ್ರೀ ಕುಲಕರ್ಣಿ, ಅಕ್ಷತಾ ದೇಶಪಾಂಡೆ, ಭಾರತಿ ದೇಶಪಾಂಡೆ, ಲಕ್ಷ್ಮೀ ಮನಗೂಳಿ, ಡಾ. ವಿದ್ಯಾ ಥೊಬ್ಬಿ, ಡಾ. ಭವಾನಿ ಗಲಗಲಿ, ಡಾ. ಪ್ರಿಯಾ ಕಿರಣ ಪಾಟೀಲ, ಡಾ. ಶೋಭಾ ಬಿದರಿ, ಡಾ. ಮಾಲಿನಿ ಪ್ರಭುಗೌಡ ಪಾಟೀಲ, ಡಾ. ನಿವೇದಿತಾ ಕುಲಕರ್ಣಿ, ಡಾ. ವಿಜಯಲಕ್ಷ್ಮಿ, ಡಾ. ಚಂದ್ರಿಕಾ ಸಂದಿಪ್ ನಾಯಕ, ವೀಣಾ ಟಂಕಸಾಲಿ, ಜಯಶ್ರೀ ಮುಂಡೇವಾಡಿ, ಗೋವಿಂದರಾಜ ದೇಶಪಾಂಡೆ ಸಮಸ್ತ ಭಜನಾ ಮಂಡಳಿ ಸದಸ್ಯರು, ಜಿಲ್ಲೆಯ ನಾಗರಿಕರು ಆಗಮಿಸಿದ್ದರು. ಮಹಿಳೆಯರಿಗಾಗಿ ಹಮ್ಮಿಕೊಂಡ ವಿವಿಧ ಮನರಂಜನೆ ಕಾರ್ಯಕ್ರಮಗಳು ಗಮನಸೆಳೆಯಿತು.