ವಿಜಯಪುರ ನಗರ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿ ಶಾಲೆಯಲ್ಲಿ ‘ತಂದೆಯರ ವಿಶ್ವ ದಿನ’ ಆಚರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ, ಶಿವಾನಂದ ಕೆಲೂರ, ವಿರೇಶ ವಾಲಿ, ಮಧ್ವಪ್ರಸಾದ ಜಿ.ಕೆ ಮತ್ತಿತರರಿದ್ದಾರೆ.  
ಜಿಲ್ಲೆ

ಹೆತ್ತವರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ; ಪುಂಡಲಿಕ ಮಾನವರ

ವಿಜಯಪುರ: ಹೆತ್ತವರನ್ನು ಗೌರವಿಸುವುದೇ ಭಾರತೀಯ ಸಂಂಸ್ಕೃತಿ. ಈ ಸಂಸ್ಕೃತಿಯೇ ಶಿಕ್ಷಣದ ಅಡಿಪಾಯಬಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ ಹೇಳಿದರು.

ನಗರ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿ ಶಾಲೆಯಲ್ಲಿ ‘ತಂದೆಯರ ವಿಶ್ವ ದಿನ’ ಆಚರಣೆ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಕೆಯು ಮಕ್ಕಳಲ್ಲಿ ಆಧುನಿಕತೆಯ ಜೊತೆಗೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮನೆಯೇ ಮೊದಲ ಪಾಠ ಶಾಲೆ ತಾಯಿ ತಾನೆ ಮೊದಲು ಗುರು ಎಂಬ ಮಾತಿದೆ. ಆದರೆ, ಮಗುವಿನ ಏಳಿಗೆಯಲ್ಲಿ ತಂದೆಯ ಪಾತ್ರವೂ ಅಗಾಧ. ಹೀಗಾಗಿ ತಂದೆಯ ದಿನಾಚರಣೆಗೂ ಮಹತ್ವ ಬಂದಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯಪುರದ ಖ್ಯಾತ ಗಾಯಕ ವಿರೇಶ ವಾಲಿ ಮಾತನಾಡಿದರು. ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎನ್.ಜಿ. ಯರನಾಳ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಶ್ಮಿ ಕವಟಗಿಮಠ ಮತ್ತಿತರರಿದ್ದರು.