ಕೋಟ: ಮಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗ ವತಿಯಿಂದ ಶನಿವಾರ ಮಹಿಳಾ ದಿನ ಆಚರಿಸಲಾಯಿತು. ಶಿಕ್ಷಕಿಯರಿಗೆ ಪುಷ್ಪ ನೀಡಿ ಗೌರವಿಸಲಾಯಿತು. ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ.ಗಾಂವಕಾರ, ಸಹಶಿಕ್ಷಕ ರಾಮದಾಸ್ ನಾಯಕ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ, ಶಿಕ್ಷಕರಾದ ರಾಜೀವ್, ಚಂದ್ರಶೇಖರ ಶೆಟ್ಟಿ, ಕುಮಾರ್ ಉಪಸ್ಥಿತರಿದ್ದರು. ಹೆರಿಯ ನಿರೂಪಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.