ಜಿಲ್ಲೆ

ವಿದ್ಯುತ್​ ಇಲಾಖೆ ನೌಕರರನ್ನು ಗೌರವಿಸಲಿ

ರಾಮದುರ್ಗ: ವಿದ್ಯುತ್​ ಇಲಾಖೆಯ ಪರಿಶ್ರಮದಿಂದ ಜನತೆ ಬೆಳಕು ಕಾಣುವಂತಾಗಿದೆ. ಇಲಾಖೆಯ ನೌಕರರ ಬಗೆಗೆ ಸಾರ್ವಜನಿಕರು ಗೌರವ ಭಾವನೆ ಹೊಂದಿದರೆ ಮತ್ತಷ್ಟು ಖುಷಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಕಿರಣ ಸಣ್ಣಕ್ಕಿ ಹೇಳಿದರು.

ಪಟ್ಟಣದ ಹೆಸ್ಕಾಂ ಉಪವಿಭಾಗದ ಕಚೇರಿ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಪವರ್​ಮನ್​ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ಇಲಾಖೆಯ ನೌಕರರ ಬೇಡಿಕೆಗಳನ್ನು ಈಡೇರಿಸಿ ನೆಮ್ಮದಿಯ ಬದುಕಿಗೆ ದಾರಿದೀಪವಾಗಬೇಕು ಎಂದರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಶಿವಪ್ರಕಾಶ ಕರಡಿ ಮಾತನಾಡಿ, ಜೀವದ ಹಂಗು ತೊರೆದು ಪವರಮನ್​ಗಳು ರಾತ್ರಿ ಹಗಲು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಾರೆ. ಅವರ ಕಾರ್ಯ ಶ್ಲಾಘಿಸಲು ಸರ್ಕಾರ ಪವರ್​ಮನ್​ ದಿನ ಆಚರಣೆಗೆ ಕರೆ ನೀಡಿದ್ದು ಹರ್ಷ ತಂದಿದೆ ಎಂದರು.

ಹೆಸ್ಕಾಂ ನೌಕರರ ಸಹಕಾರಿ ಸಂದ ಅಧ್ಯ ವಿನಾಯಕ ಸೋಮನಟ್ಟಿ, ವಿದ್ಯುತ್​ ಇಲಾಖೆಯ ನೌಕರರ ಸಂದ ಅಧ್ಯ ಮಧುಸೂಧನ ಮಾಳದಕರ, ಪವರ್​ಮನ್​ ನೌಕರರ ಸಂದ ಮುಖಂಡ ಮುತ್ತು ಬನ್ನೂರ ಮಾತನಾಡಿದರು. ವೀಣಾ ಲಟ್ಟಿ ಸ್ವಾಗತಿಸಿದರು. ರಂಜಿತ ಗೊಡಚನ್ನವರ ವಂದಿಸಿದರು.