ಮೊರಟಗಿ ಗ್ರಾಮದ ಈದ್ಗಾ ಮೈದಾನದಲ್ಲಿ ರಮಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಅಂಜುಮನ್ ಸಮಿತಿ ಕಾರ್ಯದರ್ಶಿ ಎಂ. ಕೆ. ಕಣ್ಣಿ ಮಾತನಾಡಿದರು. ಎಂ.ಪಿ. ಮುಲ್ಲಾ, ಮನಾನ ಬಾಗವಾನ, ಇನಾಯತ ದೊಡಮನಿ ಇತರರಿದ್ದರು. 
ಜಿಲ್ಲೆ

ಪರ ಧರ್ಮದ ಬಾಂಧವರನ್ನು ಗೌರವದಿಂದ ಕಾಣಿ

Vijayapura - Desk - Gurappa Lokuri

ಮೊರಟಗಿ: ಪವಿತ್ರ ರಮಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಗ್ರಾಮದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಅಂಜುಮನ್ ಸಮಿತಿ ಕಾರ್ಯದರ್ಶಿ ಎಂ. ಕೆ. ಕಣ್ಣಿ ಮಾತನಾಡಿ, ಬಡಬಗ್ಗರಿಗೆ, ಅಂಗವಿಕಲರಿಗೆ ಅನಾಥರ ನಿರ್ಗತಿಕರಿಗೆ ಸಹಾಯ ಮಾಡುವುದರ ಜೊತೆಗೆ ಅಲ್ಲಾಹನ ಶ್ಲೋಕಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಿ ಪರ ಧರ್ಮದವರನ್ನು ಗೌರವದಿಂದ ಕಾಣಬೇಕು ಎಂದರು.

ಬಳಿಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತ ಹಿಂದು ಧರ್ಮದ ಹಿರಿಯರಿಗೆ ಹಾಗೂ ಯುವಕರಿಗೆ ಹಬ್ಬದ ಶುಭಾಶಯ ತಿಳಿಸಿದರು.

ಗೆಳೆಯರನ್ನು, ಬಂಧು ಬಾಂಧವರನ್ನು ತಮ್ಮ ಮನೆಗೆ ಕರೆದೋಯ್ದು ಸಿಹಿ ಕುಡಿಸಿ ಹಬ್ಬ ಆಚರಿಸಿದರು.

ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದರು. ಪ್ರಾರ್ಥನಾ ಸ್ಥಳಕ್ಕೆ ಸಿಂದಗಿ ವೃತ್ತ ನಿರೀಕ್ಷಕ ನಾನಾಗೌಡ ಪೊಲೀಸ್‌ಪಾಟೀಲ್ ಭೇಟಿ ನೀಡಿದರು.

ಸಾಮೂಹಿಕ ಪ್ರಾರ್ಥನೆಯಲಿ ಎಂ.ಪಿ. ಮುಲ್ಲಾ, ಮನಾನ ಬಾಗವಾನ, ಇನಾಯತ ದೊಡಮನಿ, ಅಬ್ಬಾಸಲಿ ಬಳೂರಗಿ, ಸೈಯದಸಾಬ್ ಗೊರಗುಂಡಗಿ, ಮೈಬೂಬ್ ಕಕ್ಕಳಮೇಲಿ, ಸಲೀಮ್ ಕಣ್ಣಿ, ರಾಜಕ ಬಾಗವಾನ, ಬಂದೇನವಾಜ ಕಣ್ಣಿ, ಹಸನಸಾಬ ಶಿರಾಷ್ಯಾಡ್, ನಬಿಸಾಬ ಬಾಸಗಿ ಇತರರಿದ್ದರು.