ಹೊಸಕೋಟೆಯ ತಗ್ಗಲಿ ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಶಿಕ್ಷಕರನ್ನು ಸನ್ಮಾನಿಸಿದರು. ಎಂ.ಜಗನ್ನಾಥ್, ಸುಜಾತಾ, ಜ್ಯೋತಿ, ಎನ್.ಆಶಾ, ಇಂದ್ರ, ಅನಿತಾ, ವಿ.ಆಶಾ, ರಶ್ಮಿ. ಮಂಗಳಾ, ಎಸ್.ನವೀನ್ ಇದ್ದರು. 
ಜಿಲ್ಲೆ

ತಗ್ಗಲಿಹೊಸಹಳ್ಳಿ ಶಿಕ್ಷಕರಿಗೆ ಸನ್ಮಾನ

ಶಿವರಾಜ.ಎಂ

ಜಡಿಗೇನಹಳ್ಳಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ ಪಾತ್ರ ಮುಖ್ಯವಾಗಿದೆ, ಅವರ ಮಾರ್ಗದರ್ಶನ ಎಲ್ಲರಿಗೂ ಅವಶ್ಯವಾಗಿದೆ ಎಂದು ಎಂ.ಜಗನ್ನಾಥ್ ಹೇಳಿದರು.
ಹೊಸಕೋಟೆ ತಾಲೂಕು ತಗ್ಗಲಿಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ 2006-07 ನೇ ವರ್ಷದ ಹಳೇಯ ವಿದ್ಯಾರ್ಥಿಗಳು ಇತ್ತೀಚಿಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವಿದ್ಯಾರ್ಥಿಗೂ ಶಿಕ್ಷಕರೇ ಮಾರ್ಗದರ್ಶಕರಾಗಿರುತ್ತಾರೆ, ಬಾಲ್ಯದ ಜೀವನದೊಂದಿಗೆ ಪಾಠ, ಪಠ್ಯತೇರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ನಮ್ಮನ್ನು ಹರಸುವ ಶಿಕ್ಷಕರನ್ನು ನಾವು ಜೀವನದಲ್ಲಿ ಎಂದೂ ಮರೆಯುವಂತಿಲ್ಲ ಎಂದರು. ಸರ್ಕಾರಿ ಶಾಲೆಯಲ್ಲಿ ಓದಿ ಇಂದು ನಾವೆಲ್ಲ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಂಡು ಭವಿಷ್ಯ ರೂಪಿಸಿಕೊಂಡಿದ್ದೇವೆ. ಇದಕ್ಕೆಲ್ಲ ಶಿಕ್ಷಕರು ನಮ್ಮ ಓದಿನ ಸಮಯದಲ್ಲಿ ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಸ್ಮರಿಸಿದರು.
2007 ನೇ ಸಾಲಿನ ಹಳೇಯ ವಿದ್ಯಾರ್ಥಿಗಳು ತಗ್ಗಲಿ ಹೊಸಹಳ್ಳಿ, ಚಿಕ್ಕತಗಲ್ಲಿ ಹಾಗೂ ದೊಡ್ಡತಗ್ಗಲಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಮವಸ ಹಾಗೂ ಪಠ್ಯಪುಸ್ತಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.