ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು.  
ಜಿಲ್ಲೆ

ಗಾಂಧೀಜಿ ಹೋರಾಟ, ಚಿಂತನೆಗೆ ಗೌರವ

ಕುಂದಾಪುರ: ಮಹಾತ್ಮಗಾಂಧಿ ಎಂದರೆ ಮೊದಲಿಗೆ ನೆನಪಾಗುವುದು ಅವರು ತನ್ನ ಜೀವನದಲ್ಲಿ ಪಾಲಿಸಿದ ಸರಳತೆ, ಸತ್ಯ, ನ್ಯಾಯ, ನೀತಿ ಹಾಗೂ ಅಹಿಂಸೆಯ ಹೋರಾಟ. ಇಡೀ ವಿಶ್ವವೇ ಅವರ ಹೋರಾಟ, ಚಿಂತನೆಯನ್ನು ಗೌರವಿಸುತ್ತದೆ ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮಹಾತ್ಮಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕುಂದಾಪುರ ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿರಾಜ್ ಪೂಜಾರಿ, ತಾಲೂಕು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಕಾಂಗ್ರೆಸ್ ಹಿಂದುಳಿ ವರ್ಗಗಳ ಸಮಿತಿ ಅಧ್ಯಕ್ಷ ಅಮಾಸೆಬೈಲು ಕೃಷ್ಣ ಪೂಜಾರಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆ ಆಶಾ ಕರ್ವಾಲೋ, ಕುಂದೇಶ್ವರ ದೇವಸ್ಥಾನ ಟ್ರಸ್ಟಿ ಸೀಮಾಚಂದ್ರ ಪೂಜಾರಿ, ಪ್ರಮುಖರಾದ ಕೋಣಿ ನಾರಾಯಣ ಆಚಾರ್, ಕೆ.ಪಿ. ಅರುಣ್, ಜ್ಯೋತಿ ಡಿ. ನಾಯ್ಕ, ರಿಯಾಜ್ ಕೋಡಿ, ವಿವೇಕಾನಂದ, ಪ್ರೇಮಾ ಡಿಕುನ್ಹಾ, ಜೋಯ್ ರೆಬೊಲ್ಲೋ, ವೇಲಾ ಬ್ರಗಾಂಜಾ, ಅಲ್ಫಾಝ್, ಜೋಸೆಫ್ ರೆಬೆಲ್ಲೋ, ನಿತಿನ್ ಡಿಸೋಜ ಕೋಣಿ, ಮೇಬೆಲ್ ಡಿ’ಸೋಜ, ರಾಕೇಶ್ ಶೆಟ್ಟಿ, ಮುನಾಫ್ ಕೋಡಿ, ವಿಜಯ್ ಮೊದಲಾದವರಿದ್ದರು.