ಜಿಲ್ಲೆ

ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇವಾಲಯ, ಮಠ, ಮಂದಿರಗಳನ್ನು ನಿಮಿರ್ಸಿ ಅಲ್ಲಿ ಅರ್ಚನೆ, ಆರಾಧನೆ, ಪ್ರಾರ್ಥನೆ, ಭಜನೆ, ವಿಭಿನ್ನ ನಾಮಸ್ಮರಣೆ ಮಾಡುವ ಜತೆಗೆ ನಿತ್ಯ ದೇವರ ಸನ್ನಿಧಾನದಲ್ಲಿ ಮನುಷ್ಯ ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪ ಮಾಡಬೇಕು ಎಂದು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಮಾರುತಿ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಶಿಖರಕ್ಕೆ ಕಳಸಾರೋಹಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ವೀರ ಮಾರುತಿ ಸನ್ನಿಧಾನದಲ್ಲಿ ನಡೆಸುವ ಭಕ್ತಿಯ ಅನುಸಂಧಾನದಲ್ಲಿ ಸಜ್ಜನಿಕೆಯ ಸತ್ಯ ಶುದ್ಧ ಜೀವನ ವಿಧಾನದ ಒಂದೇ ಒಂದು ಸಂಕಲ್ಪದಿಂದ ಬದುಕಿನಲ್ಲಿ ಬಹಳಷ್ಟು ಬದಲಾವಣೆ ಕಾಣಲು ಸಾಧ್ಯ. ಇದಕ್ಕೆಲ್ಲ ಶ್ರೀವಿಷ್ಣುವಿನ ಅವತಾರವೇ ಆಗಿರುವ ಶ್ರೀರಾಮಚಂದ್ರನ ಆದರ್ಶ ನಮ್ಮ ಮುಂದಿದೆ ಎಂದರು.
ದೇವಾಲಯಕ್ಕೆ ವಿವಿಧ ಸೇವೆಗಳನ್ನು ಸಲ್ಲಿಸಿದ ಅಶೋಕ ಕೌಜಗೇರಿ, ಅಶ್ವಿನ ಗಾಂವಕರ, ಚಂದ್ರಿಕಾ ದೇಶಪಾಶಂಡೆ, ಆರ್​.ಸಿ. ನೇಗಿನಹಾಳ, ರಾಜೇಶ ಖಾಮೋಜಿ, ಆಕಾಶ ಜಮಖಂಡಿ, ಶಾಂತಾಬಾಯಿ ಇಟಗಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಶ್ರೀ ವೀರಮಾರುತಿ ಹಾಗೂ ನವಗ್ರಹ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯ ಪ್ರಸನ್ನ ದೇಶಪಾಂಡೆ, ಪದಾಧಿಕಾರಿಗಳಾದ ವಿ.ವಿ.ಧಾರವಾಡ, ಶಿವಾನಂದ ಹುಣಸಿಮರದ, ಕೆ.ಜಿ.ದೇವರಮನಿ, ಪಿ.ಎ. ಜಂತ್ಲಿ, ಶಾಂತಾಬಾಯಿ ಇಟಗಿ, ಗೀತಾ ತುಂಬರಗುದ್ದಿ, ಸುರೇಖಾ ಆನೇಗುಂದಿ, ಜಿ.ಬಿ. ತುಂಬರಗುದ್ದಿ, ಶೀತಲ ಪಾಟೀಲ, ಸುನೀಲ ಕುಲಕಣಿರ್, ಈರಯ್ಯ ಹಿರೇಮಠ, ಬಸವರಾಜ ಹೂಗಾರ, ಇತರರು ಇದ್ದರು.