ಜಿಲ್ಲೆ

ದುರ್ಬಲರನ್ನು ಸಬಲಗೊಳಿಸುವ ಸಂಕಲ್ಪ ಮಾಡಿ

ಮರಿದೇವ ಹೂಗಾರ

ಹುಬ್ಬಳ್ಳಿ: ಟ್ರಸ್ಟ್ ಫಾರ್ ರಿಟೇಲರ್ಸ್ ಮತ್ತು ರಿಟೇಲ್ ಅಸೋಸಿಯೇಟ್ಸ್ ಆಫ್ ಇಂಡಿಯಾ (ಟಿಆರ್‌ಆರ್‌ಎಐಎನ್) ಸಹಯೋಗದೊಂದಿಗೆ ವೈವಿಧ್ಯತೆ, ಸಮಾನತೆ, ಸಹಬಾಳ್ವೆ ಉತ್ತೇಜಿಸಲು ನಗರದಲ್ಲಿ ಶನಿವಾರ ವಾಕಥಾನ್ ಏರ್ಪಡಿಸಲಾಗಿತ್ತು.

ಇಲ್ಲಿಯ ಕೆಎಂಸಿಆರ್‌ಐ ಆಸ್ಪತ್ರೆಯ ಮುಖ್ಯ ದ್ವಾರದಿಂದ ಆರಂಭವಾದ ವಾಕಥಾನ್, ಕಲ್ಯಾಣನಗರ ರಂಗಮಂದಿರ ಸಮುದಾಯ ಭವನದಲ್ಲಿ ಸಂಪನ್ನಗೊಂಡಿತು.

ವಾಕಥಾನ್‌ಗೆ ಚಾಲನೆ ನೀಡುವ ಮುನ್ನ ಮಹಾತ್ಮಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. 600ಕ್ಕೂ ಹೆಚ್ಚು ಜನರು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ದುರ್ಬಲರನ್ನು ಸಬಲರನ್ನಾಗಿಸುವ ಸಂಕಲ್ಪ ಎಲ್ಲರೂ ಮಾಡಬೇಕು. ಅಂಗವಿಕಲರು, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ನಮ್ಮ ಕಂಪನಿ ಹೊಂದಿದೆ ಎಂದರು.

ವಾಕಥಾನ್‌ಗೆ ಆಗು ನೀ ಅನಿಕೇತನ ಫೌಂಡೇಷನ್, ಸಂಕಲ್ಪ ರೂರಲ್ ಸೊಸೈಟಿ, ಅವಿಕಾ ಗುರುಕುಲ ಫೌಂಡೇಷನ್, ರಕ್ಷಾ ಫೌಂಡೇಷನ್, ದೀನಬಂಧು ಫೌಂಡೇಷನ್, ಆಶಾದೀಪ ಫೌಂಡೇಷನ್ ಸೇರಿ ಇತರ ಎನ್‌ಜಿಒಗಳು ವಾಕಥಾನ್‌ಗೆ ಸಾಥ್ ನೀಡಿದ್ದವು.

ಯೋಗಗುರು ಭವರಲಾಲ್ ಆರ್ಯ, ಇನಾರ್‌ಬಿಟ್ ಮಾಲ್ಸ್ ಪ್ರೈ.ಲಿ. ಜನರಲ್ ಮ್ಯಾನೇಜರ್ ನಿತೇಶ ಶೆಟ್ಟಿ, ಟಿಆರ್‌ಆರ್‌ಎಐಎನ್ ಮುಖ್ಯಸ್ಥ ಪ್ರಿಯರಂಜನ್ ಬೀದರ್ ಇತರರು ಇದ್ದರು.