ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆ ಜಿ.ಎಸ್.ಶ್ರೀದೇವಿ ಚಕ್ರವರ್ತಿ ಅವರು ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.33ರಲ್ಲಿ ಶ್ರೀದೇವಿ ಅವರು ನಗರಸಭೆಗೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗದೇ ಇರುವುದರಿಂದ ರಾಜೀನಾಮೆ ನೀಡಿರುವುದಾಗಿ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಪುನರ್ಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್ ನಿಷೇಧಕ್ಕೆ ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡ ಬೇಕೆಂದು ಆಗ್ರಹಿಸಿ ಈಚೆಗೆ ಶ್ರೀದೇವಿ ಅವರು ಆಯುಕ್ತೆ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗೆ ಮನವಿ ಸಲ್ಲಿಸಿದ್ದು,ನನ್ನ ಉಪಾಧ್ಯಕ್ಷೆ ಸ್ಥಾನಕ್ಕೆ ಕುತ್ತು ತರ ಲಿದೆ ಎಂಬುದನ್ನೂ ನಿರೀಕ್ಷಿಸಿದ್ದೇ.ತಮ್ಮ ವಿರುದ್ಧ ಅವಿಶ್ವಾಸ ಮಂಡನೆಗೆ ಹಲವು ಸದಸ್ಯರು ಮುಂದಾಗಿದ್ದಾರೆ. ನಗರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತವಲ್ಲ,ಕೆಲಸ ಶಾಶ್ವತ,ಅಧಿಕಾರದ ಮೇಲೆ ವ್ಯಾಮೋಹವಿಲ್ಲ.
ಅವಿಶ್ವಾಸದ ನಡೆಯಿಂದ ಬೇಸರವಾಗಿಲ್ಲ. 2024 ಸೆಪ್ಟೆಂಬರ್26ರಂದು ನಾಲ್ಕನೇ ಅವಧಿಗೆ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದೇ. ಕೆಲಸ ಮಾಡುವವರಿಗೆ,ವ್ಯವಸ್ಥೆ ಪ್ರಶ್ನಿಸುವವರಿಗೆ ಇದು ಕಾಲವಲ್ಲವೆಂದು ಈಚೆಗೆ ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದರು.