ಜಿಲ್ಲೆ

ಮೂಲಭೂತ ಸೌಕರ್ಯ ಒದಗಿಸದ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ನಿವಾಸಿಗಳ ಹಿಡಿಶಾಪ

ಕಿತ್ತೂರು : ನೀರು, ದಿನಸಿ ದಿನನಿತ್ಯದ ಮೂಲಭೂತ ಸೌಕರ್ಯಗಳ ಒದಗಿಸದ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಕಿತ್ತೂರಿನ ಸಿಲ್ ಡೌನ್ ಪ್ರದೇಶದ ನಿವಾಸಿಗಳ ಹಿಡಿಶಾಪ ಹಾಕಿ ಪ್ರತಿಭಟಿಸಿದ ನಿವಾಸಿಗಳು.

ಕಿತ್ತೂರಿನ ರಾವಳ ಓಣಿಯಲ್ಲಿ ಇತ್ತಿಚ್ಚೆಗೆ ಎರಡು ಕೋವಿಡ ಪ್ರಕರಣಗಳು ಕಂಡು ಬಂದಿದವು ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಸಂಬಂಧಿಸಿದ ಪ್ರದೇಶವನ್ನ ಅಧಿಕಾರಿಗಳು ಸಿಲ್ ಡೌನ್ ಮಾಡಿದ್ದರೂ ಕಳೆದ ನಾಲ್ಕು ದಿನಗಳಿಂದ ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ದಿನಸಿ, ಹಸುಗಳಿಗೆ ಮೇವು ಸೇರಿದಂತೆ ಯಾವುದು ದೊರೆಯದೆ ಅಲ್ಲಿನ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿಮಾರ್ಣವಾಯಿತು.

ಮನೆಯಿಂದ ಬಹಿರ್ದೆಶೆಗೆ ತೆರಳಲು ಸಹ ನಿವಾಸಿಗಳು ಯಾತನೆ ಅನುಭವಿಸಿದರು. ಅಲ್ಲದೆ ಸ್ವಚ್ಚತೆ, ಪಾಗಿಂಗ್ ಸ್ಯಾನಿಟೈಜರ ಮಾಡಲಿಲ್ಲ ಈ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನೆಯಾಗಲಿಲ್ಲ. ಈ ಹಿನ್ನೆಲೆ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ತಮ್ಮ ಅಸಮಾದಾನ ಹೊರಹಾಕಿ ನಮ್ಮಗೆ ಕಳೆದ ನಾಲ್ಕು ದಿನಗಳಿಂದ ಇಲ್ಲಿ ಕುಡಿಯಲು ನೀರು ಇಲ್ಲ, ಮನೆಯಲ್ಲಿ ಆಹಾರ ಸಾಮಗ್ರಿಗಳು ಖಾಲಿಯಾಗಿವೆ.

ಹಾಲು ಸೇರಿದಂತೆ ಅಗತ್ಯ ವಸ್ತುಗಳು ಇಲ್ಲ ಇವುಗಳನ್ನು ತೆಗೆದುಕೊಳ್ಳಲು ಹೊರಹೊಗಲು ಅಧಿಕಾರಿಗಳು ಬೀಡುತ್ತಿಲ್ಲ. ಹಸುಗಳಿಗೆ ತಿನ್ನಲು ಆಹಾರ ವಿಲ್ಲದೆ ಮುಕರೋದನೆ ಅನುಭವಿಸುತ್ತಿವೆ. ನಾವು ಇದ್ದ ಸ್ಥಳಕ್ಕೆ ಪೂರೈಸಿ ಎಂದು ಬೇಡಿಕೊಂಡರು ಸಹ ಕಳುಹಿಸುತ್ತಿಲ್ಲ ಹೀಗಾದರೆ ನಾವುಗಳು ಇಲ್ಲಿ ಜೀವನ ಹೇಗೆ ನಡೆಸಬೇಕು. ಕಡು ಬಡವರು ಕೆಲಸ ವಿಲ್ಲದೆ ಊಟವಿಲ್ಲದೆ ಪರದಾಡುತ್ತಿದ್ದಾರೆ. ಪಟ್ಟಣ ಪಂಚಾಯತಿ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶಾಸಕರು ನಮ್ಮ ಗೋಳು ಕೇಳಿ ಕನಿಷ್ಠ ಇಲ್ಲಿಯ ಬಡವರಿಗೆ ಆಹಾರ ಸಾಮಗ್ರಿ ಕೀಟ್ ಅದರು ನೀಡಿ ಇಲ್ಲಿಯ ಜನತೆಯ ಸಮಸ್ಯೆಗೆ ಸ್ಪಂದಿಸಿ ಎಂದು ಇಲ್ಲಿಯ ನಿವಾಸಿಗಳು ಮನವಿ ಮಾಡಿದರು.