ವಿಜಯವಾಣಿ ಸುದ್ದಿಜಾಲ ಮಂಗಳೂರು
ಯುವ ಲೇಖಕಿ, ವಾಗ್ಮಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ ಎರಡನೇ ಆಂಗ್ಲ ಪುಸ್ತಕ ‘ಭಾರತ್ @ 2047- ರೋಲ್ ಆ್ ಯೂತ್’ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂದರ್ಭ ಬಿಡುಗಡೆಯಾಗುತ್ತಿದೆ.
ಭಾರತ (ಭಾರತ) ಸ್ವಾತಂತ್ರ್ಯದ 100 ನೇ ವರ್ಷದತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ಸದೃಢ ಭಾರತ ನಿರ್ಮಾಣದಲ್ಲಿ ಯುವಜನರ ಸಕ್ರಿಯ ಪಾತ್ರ ಹೇಗೆ ಇರಬೇಕು? ಎನ್ನುವ ಕುರಿತು ಇದೆ.
ಈ ಪುಸ್ತಕವು 36 ವರ್ಷ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ತನ್ನ ಅಜ್ಜ ಸಾರ್ಜೆಂಟ್ ಅಲೆಕ್ಸ್ ಮೋನಿಸ್ ಮೂಡುಬಿದಿರೆ ಅವರಿಗೆ ಸಮರ್ಪಿಸಿರುವುದಾಗಿ ರೆಶೆಲ್ ಬ್ರೆಟ್ನಿ ತಿಳಿಸಿದ್ದಾರೆ.
ಲೇಖಕಿ ಬ್ರೆಟ್ನಿ ಫೆರ್ನಾಂಡಿಸ್ ಅವರು ಪ್ರಸ್ತುತ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ.