ಜಿಲ್ಲೆ

ಜಲಾಶಯ ಭರ್ತಿ ಮಳಗಿ- ದಾಸನಕೊಪ್ಪ ಹೆದ್ದಾರಿ ಬಂದ್

ಮುಂಡಗೋಡ: ಮಳಗಿ ಧರ್ವ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವ ಪರಿಣಾಮ ಜಲಾಶಯದ ಕೆಳಭಾಗದಲ್ಲಿರುವ ಮಳಗಿ- ದಾಸನಕೊಪ್ಪ ಹೆದ್ದಾರಿಯ ಸೇತುವೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಸಂಚಾರ ಬಂದ್ ಆಗಿದೆ.

ಮಳಗಿಯಿಂದ ನಾಲ್ಕು ಕಿ.ಮೀ. ಅಂತರದಲ್ಲಿ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮವಿದ್ದು, ಈ ಎರಡು ಗ್ರಾಮಗಳ ನಡುವೆ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿಯೇ ಜಲಾಶಯದ ಕೋಡಿ ನೀರು ಹರಿದು ಹೋಗುವ ಸೇತುವೆಯಿದೆ. ಧರ್ವ ಜಲಾಶಯದಲ್ಲಿ ಕೋಡಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಸಂಚಾರ್ ಬಂದ್ ಆಗಿದೆ.