ಜಿಲ್ಲೆ

ನವಲಗುಂದ ತಾಲೂಕಿನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ

ನವಲಗುಂದ: ಪಟ್ಟಣದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ತಾಲೂಕಿನ ವಿವಿಧ 16 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಉಪವಿಭಾಗಾಧಿಕಾರಿ ಅಶೋಕ ತೇಲಿ, ನವಲಗುಂದ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ
ಅಳಗವಾಡಿ:
ಅ ವರ್ಗ, ಎಸ್‌ಟಿ ಮಹಿಳೆ
ಜಾವೂರ: ಸಾಮಾನ್ಯ ಮಹಿಳೆ, ಬ ವರ್ಗ ಮಹಿಳೆ
ಗುಮ್ಮಗೋಳ: ಬ ವರ್ಗ ಮಹಿಳೆ, ಎಸ್‌ಸಿ ಮಹಿಳೆ
ಶಿರೂರ: ಎಸ್‌ಸಿ ಮಹಿಳೆ, ಸಾಮಾನ್ಯ
ಮೊರಬ: ಅ ವರ್ಗ ಮಹಿಳೆ, ಸಾಮಾನ್ಯ
ಶಿರಕೋಳ: ಸಾಮಾನ್ಯ, ಅ ವರ್ಗ
ತಿರ್ಲಾಪುರ: ಸಾಮಾನ್ಯ, ಸಾಮಾನ್ಯ ಮಹಿಳೆ
ಯಮನೂರ: ಅ ವರ್ಗ ಮಹಿಳೆ, ಸಾಮಾನ್ಯ
ಕಾಲವಾಡ: ಅ ವರ್ಗ, ಸಾಮಾನ್ಯ ಮಹಿಳೆ
ಬೆಳಹಾರ: ಸಾಮಾನ್ಯ, ಸಾಮಾನ್ಯ
ನಾಯಕನೂರು: ಸಾಮಾನ್ಯ, ಅ ವರ್ಗ ಮಹಿಳೆ
ತಡಹಾಳ: ಸಾಮಾನ್ಯ, ಸಾಮಾನ್ಯ ಮಹಿಳೆ
ಗುಡಿಸಗಾರ: ಸಾಮಾನ್ಯ, ಅ ವರ್ಗ ಮಹಿಳೆ
ಬೆಳವಟಗಿ: ಎಸ್‌ಟಿ ಮಹಿಳೆ, ಸಾಮಾನ್ಯ
ಹಾಳಕುಸುಗಲ್ಲ: ಸಾಮಾನ್ಯ ಮಹಿಳೆ, ಅ ವರ್ಗ
ಹೆಬ್ಬಾಳ: ಸಾಮಾನ್ಯ ಮಹಿಳೆ, ಸಾಮಾನ್ಯ