ಸಿರಿಗೇರಿ ಸಮೀಪದ ಎಂ ಸುಗೂರು ಗ್ರಾಪಂ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಮಹಿಳಾ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷ ಬಸವರಾಜ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಅನುಷಾ ನಾಗರಾಜ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಸ್ ಮಂಜುನಾಥ ಬಾಗಳಿ, ಕಾರ್ಯದರ್ಶಿ ಎಂ ಮಲ್ಲಪ್ಪ, ವಕೀಲರಾದ ಬಸವರಾಜ ಸಂಗಪ್ಪನವರ ಹಾಗೂ ಪಿಡಿಒ ರುಬಿನಾ ಇತರರಿದ್ದರು. 
ಜಿಲ್ಲೆ

ಮೀಸಲಾತಿ ಸದ್ವಳಕೆ ಮಾಡಿಕೊಳ್ಳಲಿ

ರುದ್ರಪ್ಪ ವಾಲಿ

ಸಿರಿಗೇರಿ: ಬಾಲ್ಯ ವಿವಾಹ, ಬಡತನ, ಅಸ್ಪೃಶ್ಯತೆ, ಜಾತಿ ನಿರ್ಮೂಲನೆ ಇವುಗಳನ್ನು ಹಂತ ಹಂತವಾಗಿ ಕಿತ್ತೆಸೆಯಬೇಕು ಎಂದು ಪಿಡಿಒ ರಮೇಶ್ ತಿಳಿಸಿದರು.

ಸಮೀಪದ ಎಂ ಸೂಗುರು ಗ್ರಾಪಂ ಕಚೇರಿಯಲ್ಲಿ ಗುರುವಾರ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶವಿದ್ದು, ಮುಕ್ತವಾಗಿ ಭಾಗವಹಿಸಬೇಕು. ಮಹಿಳೆಯರಿಗೆ ಶೇ. 50 ಮೀಸಲಾತಿಯಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.