ತುಮಕೂರು : ವಿಶ್ವವಿದ್ಯಾಲಯದ ನಿಯಮದಂತೆ ಗರಿಷ್ಠ 6 ವರ್ಷದಲ್ಲಿ ಪದವಿ ಪೂರ್ಣಗೊಳಿಸಲಾಗದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ಬರೆಯಲು ಅಂತಿಮ ಅವಕಾಶ ನೀಡಿದ್ದ ತುಮಕೂರು ವಿವಿಯು ಲಿತಾಂಶ ೋಷಿಸಿ ತಿಂಗಳೇ ಉರುಳಿದರೂ ಮೂಲ ಅಂಕಪಟ್ಟಿ ನೀಡಲು ವಿಳಂಬ ಮಾಡಿರುವುದು ಗೊಂದಲ ಮೂಡಿಸಿದೆ.
ಡಬಲ್ ಡ್ಯೂರೇಷನ್‌ನಲ್ಲಿ ಪದವಿ ಪೂರ್ಣಗೊಳಿಸಲಾಗದೆ ಪದವಿ ಪಡೆಯಲು ಅವಕಾಶ ಕಳೆದುಕೊಂಡಿದ್ದ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದ್ದು ಲಿತಾಂಶ ಪ್ರಕಟವಾಗಿದೆ. ತಾಂತ್ರಿಕ ಕಾರಣದ ನೆಪಮಾಡಿಕೊಂಡು ಮೂಲ ಅಂಕ ಪಟ್ಟಿ ನೀಡಲು ತಡಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವ ಪೂರ್ವದಲ್ಲಿ ತುಮಕೂರು ವಿವಿಯಲ್ಲಿ ಮೂರು ವರ್ಷದ ಪದವಿ ಕೋರ್ಸ್‌ಗೆ ಅವಕಾಶವಿತ್ತು, ಪದವಿ ಪೂರ್ಣಗೊಳಿಸಲು 6 ವರ್ಷ ಗರಿಷ್ಠ ಮಿತಿ ನೀಡಲಾಗಿತ್ತು. ಮಾನವೀಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಿಕೊಳ್ಳಲು ವಿವಿ ಅವಕಾಶ ನೀಡಿತ್ತಾದರೂ ಅಂಕಪಟ್ಟಿ ನೀಡುವಲ್ಲಿ ತಡಮಾಡಿರುವುದು ದೊಡ್ಡ ಸಮಸ್ಯೆ ತಂದೊಡ್ಡಿದೆ.
ಪ್ರಸ್ತುತ ಸ್ನಾತಕೋತ್ತರ ಪದವಿಗೂ ಪ್ರವೇಶಾತಿ ಪೂರ್ಣವಾಗುತ್ತಿದೆ, ವಿವಿಧ ಖಾಸಗಿ ಸಂಸ್ಥೆಗಳಲ್ಲಿಯೂ ಕೆಲಸ ನೀಡುವಾಗ ಮೂಲ ಅಂಕಪಟ್ಟಿ ಕೇಳುವುದರಿಂದ ಮೂಲ ದಾಖಲೆಯ ಅಗತ್ಯವಿದೆ. ಶೀಘ್ರವಾಗಿ ಅಂಕಪಟ್ಟಿ ದೊರೆತರೆ ಸಮಸ್ಯೆ ಬಗೆಹರಿಯಲಿದ್ದು, ವಿವಿ ಆಡಳಿತಕ್ಕೆ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
2011ಕ್ಕಿಂತ ಹಿಂದೆ ಪದವಿ ಪೂರ್ಣಗೊಳಿಸದ ಸಾವಿರಾರು ವಿದ್ಯಾರ್ಥಿಗಳು ಜಿಲ್ಲೆಯೆಲ್ಲೆಡೆ ಇದ್ದಾರೆ, ಅವರಲ್ಲಿ 3 ಸಾವಿರ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಲು ಮತ್ತೊಂದು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಮನವಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕಡೆಯ ಅವಕಾಶವನ್ನು ತುಮಕೂರು ವಿವಿ ಸಿಂಡಿಕೇಟ್ ನೀಡಿ, ಪರೀಕ್ಷೆ ಬರೆಸಿ, ಲಿತಾಂಶ ಕೂಡ ಈಗಾಗಲೇ ಪ್ರಕಟಿಸಿದೆ.
ಫಲಿತಾಂಶ ಪ್ರಕಟವಾಗಿ ತಿಂಗಳುಗಳೇ ಕಳೆದರೂ ತುಮಕೂರು ವಿವಿ ಅಂಕಪಟ್ಟಿ ನೀಡಲು ಉದಾಸೀನತೆ ಏಕೆ ತೋರಿದೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭವಿಷ್ಯದ ವಿದ್ಯಾಭ್ಯಾಸ ಹಾಗೂ ಉದ್ಯೋಗ ಸೇರ್ಪಡೆ ಕಾರಣಕ್ಕೆ ಅಂಕಪಟ್ಟಿ ಅಗತ್ಯವಿದೆ, ಕೂಡಲೇ ಅಂಕಪಟ್ಟಿ ನೀಡಲು ವಿವಿ ಆಡಳಿತ ಕ್ರಮಕೈಗೊಳ್ಳಬೇಕು. ಡಾ.ಸಾಸಲು ಸತೀಶ್, ಸಿಂಡಿಕೇಟ್ ಮಾಜಿ ಸದಸ್ಯ ನಿಗದಿನ ಸಮಯದಲ್ಲಿ ಪದವಿ ಪೂರ್ಣಗೊಳಿಸಿಕೊಳ್ಳಲಾಗದ ವಿದ್ಯಾರ್ಥಿಗಳಿಗೆ ವಿವಿ ಅವಕಾಶ ನೀಡಿತ್ತು. 3 ಸಾವಿರಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದರೂ 1400 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಲಿತಾಂಶ ಕೂಡ ಪ್ರಕಟವಾಗಿದೆ. ಶೀಘ್ರವಾಗಿ ಮೂಲ ಅಂಕ ಪಟ್ಟಿ ಕೂಡ ಅವರಿಗೆ ಲಭ್ಯವಾಗಲಿದೆ. ಪ್ರೊ.ನಿರ್ಮಲ್‌ಕುಮಾರ್ ಕುಲಸಚಿವ (ಪರಿಕ್ಷಾಂಗ)