ಚಿಕ್ಕಬಳ್ಳಾಪುರ: ಇಲ್ಲಿನ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕೈಗೊಂಡಿದ್ದ ಪ್ರಾಜೆಕ್ಟ್ ಓಪನ್ ಹೌಸ್, ಇನೋವೇಟೀವ್ ಇಂಜಿನಿಯರಿಂಗ್ ಮತ್ತು ಸೈನ್ಸ್ ಅಂಡ್ ಟೆಕ್ನಾಲಜಿ ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಮಾದರಿಗಳು ಗಮನ ಸೆಳೆದವು.
ಸಿವಿಲ್, ಯಾಂತ್ರಿಕ, ವೈಮಾನಿಕ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳು ತಾಂತ್ರಿಕತೆಯ ಪ್ರಾತ್ಯಕ್ಷಿಕತೆ ನೀಡಿದರು. ರೋಬೋಟಿಕ್ಸ್, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಐ.ಒ.ಟಿ, ಆಟೋಮೇಟಿವ್ ಪಂಚಿಂಗ್ ಸಿಸ್ಟಮ್, ಎಂಬೇಡೆಡ್ ಸಿಸ್ಟಮ್ಸ್, ನ್ಯಾನೋ ಎಲೆಕ್ಟ್ರಾನಿಕ್ಸ್, ಇ-ವೆಹಿಕಲ್ಸ್, ಪ್ರಿಂಟೆಡ್ ಎಲೆಕ್ಟ್ರಾನಿಕ್ಸ್, ಗ್ಯಾಸ್ ಸೆನ್ಸಿಂಗ್, ಸೆನ್ಸಾರ್‌ಗಳು, ನವೀಕರಿಸಬಹುದಾದ ಶಕ್ತಿ, ಡ್ರೋನ್ ತಂತ್ರಜ್ಞಾನ, ಸ್ವಯಂ ಚಾಲಿತ ವಾಹನಗಳು, ಅಂತರ್ ಜಲ ಮಟ್ಟ ಸೂಚ್ಯಾಂಕ, ಸ್ಮಾರ್ಟ್ ರೋಡ್, ವೈಮಾನಿಕ ತಂತ್ರಜ್ಞಾನಗಳು, ಶಕ್ತಿ ಉತ್ಪಾದನೆ, ಕೃತಕ ಬುದ್ದಿವಂತಿಕೆ, ಕಂಪ್ಯೂಟರ್ ವಿನ್ಯಾಸ ಸೇರಿದಂತೆ ವಿವಿಧ ಸಂಶೋಧನಾ ಮಾದರಿಗಳು ಗಮನ ಸೆಳೆದವು.
ಸಂಶೋಧನಾ ಮಾದರಿಗಳು ಕಲಿಕೆ, ವಿಷಯದ ಸಮಗ್ರ ಅಧ್ಯಾಯನ, ಹೊಸ ಆಲೋಚನೆ, ಕಲ್ಪನೆ ಮತ್ತು ಸ್ಪೂರ್ತಿಯನ್ನು ತಂದಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳು, ಕಾಲ ಕಾಲಕ್ಕೆ ಕಂಡ ಸುಧಾರಣೆಗಳು, ಹೊಸ ಬದಲಾವಣೆಗಳ ಬಗ್ಗೆ ಪ್ರಾಂಶುಪಾಲ ಜಿ.ಟಿ.ರಾಜು, ಕುಲ ಸಚಿವ ಜೆ.ಸುರೇಶ ಮತ್ತಿತರರಿಗೆ ವಿದ್ಯಾರ್ಥಿಗಳು ವಿವರಿಸಿದರು. ಯುವ ವಿದ್ಯಾರ್ಥಿಗಳು ವೈಜ್ಞಾನಿಕ ಮತ್ತು ತಾಂತ್ರಿಕತೆಯ ಅಧ್ಯಯನದ ಜತೆಗೆ ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ಜನರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಆದ್ಯತೆ ನೀಡಬೇಕು. ದೇಶದ ಅನೇಕ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಮಾದರಿಯಾಗಿ ಸ್ವೀಕರಿಸಿ, ಕೀರ್ತಿ ತರಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಜಿ.ಟಿ.ರಾಜು ಸಲಹೆ ನೀಡಿದರು.