ಮಸ್ಕಿ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಂಶೋಧನಾ ಕಾರ್ಯಾಗಾರ ನಡೆಯಿತು. ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ, ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್, ರೋಹಿಣಿ ಮೂರ್ತಿ, ಶಿವಗ್ಯಾನಪ್ಪ ಲಕ್ಕುಂದಿ, ಡಾ.ರಜಿಯಾ, ಕನ್ಯಾಕುಮಾರಿ, ಹಿಮಾಮಸಾಬ್ ಇತರರಿದ್ದರು. 
ಜಿಲ್ಲೆ

ಸಂಶೋಧನೆ ಎಂಬುದು ಸತ್ಯದ ಬೆಳಕು

ನರೇಶ್ ಕುಮಾರ್

ಮಸ್ಕಿ: ಸಂಶೋಧನೆ ಎಂಬುದು ಮುಂದಿನ ಜನಾಂಗಕ್ಕೆ ದಾರಿ ತೋರಿಸುವ ಸತ್ಯದ ಬೆಳಕು ಎಂದು ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಹೇಳಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಐಕ್ಯೂಎಸಿ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಹುಶಿಸ್ತೀಯ ಸಂಶೋಧನಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಸತ್ಯ ಹೇಳುವವರು ಸಂಶೋಧಾನ ಕ್ಷೇತ್ರಕ್ಕೆ ಬರಬೇಕು. ಜಾತಿ, ಧರ್ಮ ಮತ್ತು ಪ್ರದೇಶ ಎಂಬ ಭೇದ ಭಾವ ಇಟ್ಟುಕೊಳ್ಳದೆ ಸಂಶೋಧನೆಯಲ್ಲಿ ತೊಡಗಬೇಕು ಎಂದರು. ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ಮಾತನಾಡಿ, ಸಂಶೋಧನೆ ಸತ್ಯಾನ್ವೇಷಣೆ ಮಾಡುವುದಾಗಿದೆ. ಬಚ್ಚಿಟ್ಟ ಸತ್ಯವನ್ನು ಜಗತ್ತಿನ ಮುಂದೆ ಬಿಚ್ಚಿಡುವ ಎದೆಗಾರಿಕೆ ಕೆಲಸವಾಗಿದೆ ಎಂದರು.

ಐಕ್ಯೂಎಸಿ ಸಂಚಾಲಕಿ ರೋಹಿಣಿ ಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಶಿವಗ್ಯಾನಪ್ಪ ಲಕ್ಕುಂದಿ, ಅರ್ಥಶಾಸ್ತ್ರದ ಮುಖ್ಯಸ್ಥೆ ಡಾ.ರಜಿಯಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕನ್ಯಾಕುಮಾರಿ, ರಾಜ್ಯಶಾಸ್ತ್ರದ ಮುಖ್ಯಸ್ಥ ಹಿಮಾಮಸಾಬ್, ಇತಿಹಾಸ ವಿಭಾಗದ ಮುಖ್ಯಸ್ಥ ಸಣ್ಣಪ್ಪ ನಾಯಕ, ಹಾಜಿಬಾಬ್, ಲವಕುಮಾರ, ರಾಮಣ್ಣ ನಾಯಕ ಇದ್ದರು.