ಜಿಲ್ಲೆ

ಸಂಶೋಧನೆ ಕ್ರಮಬದ್ಧ ಜ್ಞಾನದ ಹುಡುಕಾಟ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಂಬಾ ಜೋಶಿ ಅವರ ಕೃತಿಗಳು ಸಾಂಸ್ಕೃತಿಕ ಸಂಶೋಧನಾ ಕೃತಿಗಳಾಗಿದ್ದು, ಅವು ವಿಶಿಷ್ಟ ಆಲೋಚನಾ ಕ್ರಮದಿಂದ ಕೂಡಿದ್ದಾಗಿವೆ. ಸಂಶೋಧನೆ ಎನ್ನುವುದು ವ್ಯವಸ್ಥಿತ ರೀತಿಯ ಕ್ರಮಬದ್ಧವಾದ ಜ್ಞಾನದ ಹುಡುಕಾಟ ಎಂದು ಎಸ್​ಜೆಎಂವಿಎಸ್​ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಪ್ರಿಯಾ ಮಲಶೆಟ್ಟಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಡಾ. ಶಂಬಾ ಜೋಶಿ ದತ್ತಿ ಕನ್ನಡ ಭಾಷಾ ಸಂಶೋಧನಾ ದಿನ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಂಬಾ ಅವರ ಕೃತಿಗಳನ್ನು ಬಿಡುಗಡೆಗೊಳಿಸಿ ಭಾಷಾ ಸಂಶೋಧನೆ ಪ್ರಾಮುಖ್ಯತೆ ಮತ್ತು ಶಂ.ಬಾ. ಸಂಶೋಧನೆಯ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.

ಅಗಾಧ ಪಾಂಡಿತ್ಯ ಹೊಂದಿದ್ದ ಶಂಬಾ ಅವರು ತಮ್ಮ ಜೀವನದ ಬಹುಭಾಗವನ್ನು ಸಂಶೋಧನೆಯಲ್ಲಿ ಕಳೆದು, ವಿಭಿನ್ನ ನೆಲೆಗಳಲ್ಲಿ ಸತ್ಯದ ಶೋಧನೆ ಮಾಡಿ ಅನನ್ಯ ಮತ್ತು ಅಗಾಧ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಶಂಬಾ ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.

ರಾಮಚಂದ್ರ ಗೆದ್ದೆಣ್ಣವರ, ಎಸ್​.ವೈ. ಚಲವಾದಿ, ಎಸ್​.ಕೆ. ಕುಂದರಗಿ, ಚೇತನಾ ಭಟ್​, ಸತೀಶ ಛಟ್ಟಿ, ನಾಗರಾಜ ಹಾಗಲಕಿ, ಎಲ್​.ಸಿ. ಬಕ್ಕಾಯಿ, ಇತರರು ಇದ್ದರು.

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ವಿ.ಜಿ. ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.