ಜಿಲ್ಲೆ

ಬಾವಿಗೆ ಬಿದ್ದ ಚಿರತೆ ರಕ್ಷಣೆ

ಇಂದಿರಾ ಎನ್ ಕೆ

ಕಾರ್ಕಳ: ಬೆಳ್ಮಣ್ ಗ್ರಾಮದ ಅರ್ಕಳ ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಭಾನುವಾರ ಮುಂಜಾನೆ ರಕ್ಷಿಸಲಾಗಿದೆ. ಬೆಳ್ಮಣ್ ಗ್ರಾಮದ ಪರಾಡಿ ದರ್ಖಾಸು ಮನೆಯ ನಿವಾಸಿ ಫಿಲೋಮಿನಾ ಎಂಬುವರ ಮನೆಯ ಬಾವಿಗೆ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಚಿರತೆ ಕೋಳಿಯೊಂದನ್ನು ಹಿಡಿಯಲು ಬಾವಿ ದಂಡೆಯಿಂದ ಹಾರಿದ್ದು ಈ ಸಂದರ್ಭದಲ್ಲಿ ಆಯ ತಪ್ಪಿ ಚಿರತೆ ಬಾವಿಯೊಳಗೆ ಬಿದ್ದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕಾಗಮಿಸಿದ ಅಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಎಸಿಎಫ್ ಪಿ.ಶ್ರೀಧರ್, ಆರ್‌ಫ್‌ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ, ಸಿಬ್ಬಂದಿ ಪ್ರಕಾಶ್, ಸುರೇಶ್, ಮಂಜುನಾಥ್, ಮಾಂತೇಶ್, ಅಖಿಲೇಶ್, ಅರಣ್ಯ ವೀಕ್ಷಕರಾದ ಬಾಬು, ಶಮೀಮ್, ವಿತೇಶ್, ಬೆಳ್ಮಣ್ ಗ್ರಾಪಂ ಉಪಾಧ್ಯಕ್ಷ ಸಂದೀಪ್ ಪೂಜಾರಿ, ಸಮಾಜ ಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಕಾರ್ಯಾಚರಣೆಯಲ್ಲಿದ್ದರು.