ಶಿರಸಿ: ಮನೆಯ ಹಿಂದಿನ ಬಾವಿಗೆ ಬಿದ್ದಿದ್ದ ಚಿರತೆಯನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಪಾಡಿದ ಘಟನೆ ಜಾನ್ಮನೆ ವಲಯದ ನಿಲ್ಕುಂದ ಬಳಿ ಓಜಿಮನೆಯಲ್ಲಿ ನಡೆದಿದೆ.
ಸೋಮವಾರ ಬೆಳಗಿನ ಜಾವ ಘಟನೆ ನಡೆದಿದೆ. ಅಂದಾಜು 5 ವರ್ಷದ ಗಂಡು ಚಿರತೆ ಆಹಾರ ಹುಡುಕುತ್ತ ಬಂದು ಬಾವಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಚಿರತೆಯನ್ನು ಮೇಲಕ್ಕೆತ್ತಲಾಗಿದೆ. ಚಿರತೆಗೆ ಯಾವುದೇ ಗಾಯವಾಗಿಲ್ಲ ಎಂದು ವಲಯಾರಣ್ಯಾಧಿಕಾರಿ ಉಷಾ ಅರವಿಂದ ತಿಳಿಸಿದ್ದಾರೆ.