ಜಿಲ್ಲೆ

ಮನೆಯಲ್ಲಿ ಸಾಕಿದ್ದ ಮಂಗನ ಮರಿ ರಕ್ಷಣೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮನೆಯಲ್ಲಿ ಮಂಗನ ಮರಿ ಸಾಕಿದ್ದ ವಿಷಯ ತಿಳಿದು ದಾಳಿ ಮಾಡಿದ ಅರಣ್ಯ ಇಲಾಖೆ ಅಽಕಾರಿಗಳು ಹಾಗೂ ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ತಂಡ ಮರಿಯನ್ನು ರಕ್ಷಣೆ ಮಾಡಿದೆ.

ಹುಬ್ಬಳ್ಳಿಯ ಅಮರಗೋಳದ ಹೊಸಪೇಟ ಓಣಿಯ ಮೆಹಬೂಬ ಮೇಸ್ತಿç ಎಂಬುವರು ಕೆಲ ದಿನಗಳಿಂದ ಮಂಗನ ಮರಿಯನ್ನು ಸಾಕಿದ್ದರು. ವಿಷಯ ತಿಳಿದು ಅರಣ್ಯ ಇಲಾಖೆ ಅಽಕಾರಿ ರಾಯನಗೌಡ, ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ಸಮೀರ ಹಾಗೂ ಗಣೇಶ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮರಿಯನ್ನು ವಶಕ್ಕೆ ಪಡೆದು, ಕಾಡುಪ್ರಾಣಿ, ಪಕ್ಷಿಗಳನ್ನು ಸಾಕಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯಾಽಕಾರಿಗಳು ಎಚ್ಚರಿಕೆ ನೀಡಿದರು.