ಜಿಲ್ಲೆ

ಚಾರಣದ ವೇಳೆ ದಾರಿ ತಪ್ಪಿದ್ದ 6 ಯುವತಿಯರ ರಕ್ಷಣೆ

ರಾಮನಗರ: ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ್ದ ಆರು ಯುವತಿಯರನ್ನು ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ಪೊಲೀಸರು ರಕ್ಷಿಸಿದ್ದಾರೆ.

ಬೆಂಗಳೂರು ಮೂಲದ ಆರು ಮಂದಿ ಯುವತಿಯರು ಶನಿವಾರ ಬೆಳಗ್ಗೆ ರಾಮನಗರ ಬಳಿ ಇರುವ ಹಂದಿಗುಂದಿ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದರು. ಈ ವೇಳೆ ಯುವತಿಯರು ಬೆಟ್ಟದಲ್ಲಿ ದಾರಿ ತಪ್ಪಿ ಆತಂಕಗೊಂಡು 112ಕ್ಕೆ ಕರೆ ಮಾಡಿ ರಕ್ಷಣೆಗೆ ಕೋರಿದ್ದರು. ಹಂದಿಗುಂದಿ ವ್ಯಾಪ್ತಿಯಲ್ಲಿ ಕರಡಿ, ಚಿರತೆ ಹಾವಳಿ ಹೆಚ್ಚಿರುವುದರಿಂದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಹತ್ತು ಯುವಕರು ಕಾಲ್ನಡಿಗೆಯ ಮೂಲಕ ತೆರಳಿ ಸಂಜೆ ವೇಳೆಗೆ ಯುವತಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ರಾಮನಗರದಿಂದ ಸಶಸ್ತ್ರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಎಲ್ಲರನ್ನೂ ವಾಪಸ್ ಕರೆ ತಂದಿದ್ದಾರೆ . ಯುವಕರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.