ಸಾಂದರ್ಭಿಕ ಚಿತ್ರ 
ಜಿಲ್ಲೆ

ಅಕ್ರಮ ಸಾಗಾಟ 18 ಜಾನುವಾರುಗಳ ರಕ್ಷಣೆ

ಮಂಗಳೂರು: ಲಾರಿಯಲ್ಲಿ 18 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದಾಗ ಕಾವೂರು ಪೊಲೀಸರು ಗುರುವಾರ ಬೆಳಗ್ಗೆ ಕೊಟ್ಟಾರದಲ್ಲಿ ತಡೆದು ನಿಲ್ಲಿಸಿ, ಜಾನುವಾರುಗಳನ್ನು ರಕ್ಷಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ಲಾರಿ ಚಾಲಕ ಬೆಳಗಾವಿಯ ಕೆ.ಆರ್.ನಗರ ನಿವಾಸಿ ರಾಘವೇಂದ್ರ ಎಚ್.ಎಂ. (30) ಹಾಗೂ ಕ್ಲೀನರ್ ಹಾಸನದ ಹೇಮಂತ್ ಕುಮಾರ್ (28) ಬಂಧಿತರು. ವಶಕ್ಕೆ ಪಡೆದ ಎಲ್ಲಾ ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಿದ್ದಾರೆ.
ಜಾನುವಾರುಗಳನ್ನು ಬೆಳಗಾವಿಯ ಸಂತೆಯಲ್ಲಿ ಖರೀದಿಸಿ ಕೇರಳದ ಪಾಲಕ್ಕಾಡ್‌ಗೆ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ದಾಖಲಾತಿ ಇಲ್ಲದೇ ಇರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.