ಜಿಲ್ಲೆ

ಪ್ರೇಮ ವೈಫಲ್ಯದಿಂದ ಬೇಸತ್ತು ಸಮುದ್ರಕ್ಕೆ ಹಾರಿದ ಯುವಕನ ರಕ್ಷಣೆ

Uttara Kannada - Subash Hegde

ಕಾರವಾರ:ಪ್ರೆಮ ವೈಫಲ್ಯದಿಂದ ಬೇಸರಗೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಲೈಫ್‌ಗಾರ್ಡ್ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಿಸಿದ್ದಾರೆ.
ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಮುಪ್ಲಾ ಮಂಡಲ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಸ್ವಂತ ಊರಿನಲ್ಲಿ ಆತ ಪ್ರೀತಿಸುತ್ತಿದ್ದ ಯುವತಿಗೆ ಬೇರೆಯವನ ಜತೆ ವಿವಾಹವಾಗಿತ್ತು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಮುದ್ರಕ್ಕೆ ಹಾರಿದ್ದ.
ಟೂರಿಸ್ಟ್ ಮಿತ್ರ ರಾಘವೇಂದ್ರ ನಾಯ್ಕ ಹಾಗೂ ಲೈಫ್‌ಗಾರ್ಡ್ ಪ್ರಶಾಂತ ಅಂಬಿಗ, ನಗರಸಭೆ ಗಾರ್ಡನರ್ ಕ್ರಿಸ್ಟೋಫರ್ ಫರ್ನಾಂಡಿಸ್ ಭಾರಿ ಅಲೆಗಳ ನಡುವೆ ಜೀವದ ಹಂಗು ತೊರೆದು ರಕ್ಷಣೆ ಮಾಡಿದರು.