ಮೈಸೂರು: ಬಿಹಾರದ ಕಿಶನ್‌ಪುರ ಮತ್ತು ರಾಮ್‌ಭದ್ದರಪುರ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿಯ ಹಿನ್ನೆಲೆಯಲ್ಲಿ ನಗರದ ಎರಡು ರೈಲುಗಳ ಸಂಚಾರದ ಮಾರ್ಗ ಬದಲಾಯಿಸಲಾಗಿದೆ ಎಂದು ಪೂರ್ವ ಮಧ್ಯೆ ರೈಲ್ವೆ ತಿಳಿಸಿದೆ.
ಜುಲೈ 21 ರಂದು ಮೈಸೂರು ನಿಲ್ದಾಣದಿಂದ ಹೊರಡಲಿರುವ ಮೈಸೂರು-ದರ್ಭಂಗಾ ಬಾಗ್ಮತಿ ಸಾಪ್ತಾಹಿಕ ಸೂಪರ್‌ಫಾಸ್ಟ್ (12578) ಎಕ್ಸ್‌ಪ್ರೆಸ್ ರೈಲು ಸಮಸ್ತಿಪುರ, ಮುಜಫರ್‌ಪುರ, ಸೀತಾಮರಿ ಮತ್ತು ದರ್ಭಾಂಗ ಜಂಕ್ಷನ್‌ಗಳ ಮೂಲಕ ಸಂಚರಿಸಲಿದೆ.
ಜುಲೈ 25 ರಂದು ದರ್ಭಂಗಾ ನಿಲ್ದಾಣನಿಂದ ಮೈಸೂರು ಕಡೆಗೆ ಹೊರಡುವ ದರ್ಭಂಗಾ- ಮೈಸೂರು ಬಾಗ್ಮತಿ ಸಾಪ್ತಾಹಿಕ ಸೂಪರ್‌ಫಾಸ್ಟ್ (12577) ಎಕ್ಸ್‌ಪ್ರೆಸ್ ರೈಲು ದರ್ಭಾಂಗ, ಸೀತಾಮರಿ, ಮುಜಫರ್‌ಪುರ ಮತ್ತು ಸಮಸ್ತಿಪುರ ಜಂಕ್ಷನ್‌ಗಳ ಮೂಲಕ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.