ಕೆ.ಆರ್.ನಗರ: ಕೆ.ಆರ್.ನಗರ ತಾಲೂಕಿನಲ್ಲಿ ವಾಸವಿರುವ ತಮಿಳು ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡುವಂತೆ ಕರ್ನಾಟಕ ತಮಿಳರ ತಾಲೂಕು ಸಂಘದ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶ್ರೀನಿವಾಸ್, ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಮುದಾಯದವರು ವಾಸವಿದ್ದು ಸಮಾಜದ ಸಂಘದ ಹೆಸರಿನಲ್ಲಿ ಪಟ್ಟಣದ 7ನೇ ವಾರ್ಡ್‌ನ ಆಂಜನೇಯ ಬಡಾವಣೆಯಲ್ಲಿ ನಿವೇಶನ ಹೊಂದಿದ್ದೇವೆ. ಸಭೆ-ಸಮಾರಂಭಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಆದ್ದರಿಂದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಬೇಕು ಎಂದು ಕೋರಿದರು.
ಸಂಘದ ಗೌರವಾಧ್ಯಕ್ಷ ತಾಂಡು, ಕಾರ್ಯದರ್ಶಿ ಲೋಕನಾಥ್, ಸಹ ಕಾರ್ಯದರ್ಶಿ ಗಣೇಶ್, ಖಜಾಂಚಿ ರವಿ, ನಿರ್ದೇಶಕರಾದ ಕೆ.ರವಿ, ಮಣಿಕಂಠ, ಯೋಗೇಶ್, ಏಳುಮಲೈ, ನಾಗೇಂದ್ರ, ಸುರೇಶ್, ಮುರುಗೇಶ್ ಕುಮಾರ್, ಜನಾರ್ಧನ, ಸುನೀಲ್ ಮೊದಲಿಯಾರ್. ವೆಂಕಟೇಶ್ ಹಾಜರಿದ್ದರು.