ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಹತ್ತಿಕಾಳ, ಬಿಇಒ ಬಿ.ಎಫ್.ಮಜ್ಜಗಿ ಅವರಿಗೆ ನರಗುಂದ ತಾಲೂಕಿನ ಶಿಕ್ಷಕರು ಬುಧವಾರ ಮನವಿ ಸಲ್ಲಿಸಿದರು. ಎಂ.ಬಿ. ಮಲ್ಲಾಪೂರ, ಬಿ.ಆರ್.ಪಟ್ಟಣಶೆಟ್ಟಿ, ಎಂ.ಎಸ್.ಕುರಿ, ಮಾಧುರಿ ಹಿತ್ತಲಮನಿ, ಇತರರಿದ್ದರು. 
ಜಿಲ್ಲೆ

ಸರ್ವರ್ ಸಮಸ್ಯೆ ಪರಿಹರಿಸಲು ಮನವಿ

ವೀರೇಶ ಸೌದ್ರಿ

ನರಗುಂದ: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಎದುರಾಗಿರುವ ಸರ್ವರ್ ಸಮಸ್ಯೆ ಬಗೆಹರಿಸಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಹತ್ತಿಕಾಳ, ಬಿಇಒ ಬಿ.ಎಫ್.ಮಜ್ಜಗಿ ಅವರಿಗೆ ತಾಲೂಕಿನ ಶಿಕ್ಷಕರು ಬುಧವಾರ ಮನವಿ ಸಲ್ಲಿಸಿದರು.

ತಾಂತ್ರಿಕ ಕಾರಣದಿಂದಾಗಿ 3 ದಿನದಲ್ಲಿ ಒಬ್ಬ ಶಿಕ್ಷಕ ಕೇವಲ 1 ಮನೆಯ ಸಮೀಕ್ಷೆ ನಡೆಸಿದ್ದು, ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ. ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಕ್ರಮ ಬದ್ಧವಾಗಿರುವ ಯುಎಚ್‌ಐಡಿ ನಂಬರ್, ಎಪಿಕ್ ಕಾರ್ಡ್‌ಗಳ ಪಟ್ಟಿ ಕೊಡಬೇಕು. ಸಮೀಕ್ಷೆಗೆ ಮುನ್ನ ಶಿಕ್ಷಕರು ಯಾವ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೋ ಆ ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಮಾತ್ರ ನಿಯೋಜಿಸಬೇಕು. ಪಟ್ಟಣದ ನೀರಾವರಿ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ದೋತರದ ಎಂಬುವವರು ಅಂಗವಿಕಲರಾಗಿದ್ದು, ಸಮೀಕ್ಷೆಗೆ ನಿಯೋಜಿಸಿರುವುದು ಸರಿಯಲ್ಲ. ಅನಾರೋಗ್ಯಕ್ಕೀಡಾದವರು, ಗರ್ಭಿಣಿಯರನ್ನು ಸಮೀಕ್ಷೆಯಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕರಾದ ಎಂ.ಬಿ. ಮಲ್ಲಾಪೂರ, ಬಿ.ಆರ್. ಪಟ್ಟಣಶೆಟ್ಟಿ, ಎಂ.ಎಸ್. ಕುರಿ, ಪ್ರಕಾಶ ಹಳೇಮನಿ, ಎಸ್.ಎಸ್. ಭಜಂತ್ರಿ, ಎಸ್.ಎನ್. ಗೌಳನಾಯ್ಕರ, ಡಿ.ಬಿ. ಠಾಣೇದ, ಮಾಧುರಿ ಹಿತ್ತಲಮನಿ, ಖಲಂದರ ಖಡ್ಡೇಗಾರ, ಮಹೇಶ ಓಲೇಕಾರ, ಎಂ.ಕೆ. ಅಲ್ಲಿಬಾಯಿ ಇತರರಿದ್ದರು