ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ನಾಕಾದಲ್ಲಿ ಮೂಲಸೌಕರ್ಯ ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಡಸ ಗ್ರಾಮ ಘಟಕದ ಕಾರ್ಯಕರ್ತರು ತಡಸ ನಾಕಾದಲ್ಲಿ ಹಾವೇರಿಯ ಉಪವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಾಕಾದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಹೈಮಾಸ್ಕ್ ದೀಪದ ವ್ಯವಸ್ಥೆ ಮಾಡಬೇಕು. ನಾಕಾದಲ್ಲಿ ಚೆಕ್‌ಪೋಸ್ಟ್ ಹಾಗೂ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಇಲಾಖೆಯ ನಾಮಫಲಕ ಅಳವಡಿಸಬೇಕು. ಫಾರೆಸ್ಟ್ ನಾಕಾದ ಒಳಭಾಗದಲ್ಲಿ ಸ್ವಚ್ಛತೆ ಕೈಗೊಳ್ಳಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ಮುಂದಿನ 15 ದಿನಗಳ ಒಳಗಾಗಿ ನಾಕಾದಲ್ಲಿ ಅವಶ್ಯವಿರುವ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ರಕ್ಷಣಾ ವೇದಿಕೆ ಕಾರ್ಯಕರ್ತರು ನಾಕಾದಲ್ಲಿ ಸಸಿಗಳನ್ನು ನೆಟ್ಟರು.
ಗಂಗಾಧರ ಬೆಂಡಲಗಟ್ಟಿ, ರಾಜೇಸಾಬ ಕೋಲ್ಲಾಪೂರ, ಮೈನುಸಾಬ ಹಂಚಿನಾಳ, ರಾಣಪ್ಪ ವಾಟಗಾರ, ಶೇಖಪ್ಪ ಬೇಂಡಲಗಟ್ಟಿ, ಮಂಜುನಾಥ ಪೂಜಾರ, ಶಂಕ್ರಪ್ಪ ಲಮಾಣಿ, ಬಾಬಾಸಾಬ ಮಿಠಾಯಿಗಾರ, ಮಂಜು ಭಜಂತ್ರಿ, ಬಸವರಾಜ ರೆಡ್ಡಿ, ಸಿದ್ದಪ್ಪ ಹರಿಜನ, ಅನ್ವರ ಕೋಲ್ಲಾಪೂರ, ಮಹ್ಮದಅಲಿ ಮುಲ್ಲಾ, ಬಾಬುಲಾಲ ತಾಶೇವಾಲೆ, ಚಿದಾನಂದ ಗೌಡ್ರ, ಹಾಸಿಂ ಕಲಘಟಗಿ, ಜೈಲಾನಿ ಕೋಲ್ಲಾಪೂರ ಇತರರಿದ್ದರು.