ಜಿಲ್ಲೆ

ಡಿಜಿ ಇಮೇಜ್​ನಲ್ಲಿ ಭಾಗವಹಿಸಲು ಮನವಿ

ಧಾರವಾಡ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ 11ನೇ ವರ್ಷದ ಡಿಜಿ ಇಮೇಜ್-2025 ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.

ಏ. 11, 12 ಮತ್ತು 13ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಪ್ರದರ್ಶನ ನಡೆಯಲಿದೆ.

ದೇಶ-ವಿದೇಶಗಳಿಂದ ಪ್ರಸಿದ್ಧ ಛಾಯಾಗ್ರಾಹಕರು, ಛಾಯಾಗ್ರಹಣ ಸಾಧನ ವಿತರಕರು ಹಾಗೂ ಛಾಯಾಗ್ರಹಣ ಪ್ರಿಯರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ನೂತನ ಕ್ಯಾಮರಾಗಳು, ಲೆನ್ಸ್​ಗಳು, ಡ್ರೋನ್​ಗಳು, ಸ್ಟುಡಿಯೋ ಉಪಕರಣಗಳು ಸೇರಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಎಲ್ಲ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕಿಡಲಾಗಿದೆ.

ನುರಿತ ಛಾಯಾಗ್ರಾಹಕರಿಂದ ಕಾರ್ಯಾಗಾರಗಳು, ಸಂವಾದಗಳು ಹಾಗೂ ಲೈವ್ ಡೆಮೋಗಳು ನಡೆಯಲಿವೆ. ಈ ಛಾಯಾಗ್ರಹಣ ಮಹಾಮೇಳಕ್ಕೆ ರಾಜ್ಯದ ಮತ್ತು ದೇಶದ ಎಲ್ಲ ಛಾಯಾಗ್ರಾಹಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೆಪಿಎ ನಿರ್ದೇಶಕ ಪ್ರಭಯ್ಯ ಶಿವಯ್ಯ ಲಕ್ಕುಂಡಿಮಠ ಮನವಿ ಮಾಡಿದ್ದಾರೆ.