ಜಿಲ್ಲೆ

ಬೇಡಿಕೆ ಈಡೇರಿಸಲು ಶಾಸಕ ಟೆಂಗಿನಕಾಯಿಗೆ ಮನವಿ

ಮರಿದೇವ ಹೂಗಾರ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಪಿಎಂಕೆವಿವೈ ಹಾಗೂ ಆರ್ಟಿಸಿಯನ್, ರಾಜ್ಯ ಸರ್ಕಾರದ ಕಾರ್ವಿುಕ ಇಲಾಖೆಯ ಕಾರ್ಡ್ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಪದಾಧಿಕಾರಿಗಳು, ನಗರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಇದೇ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ವಿವೇಕ ಅಣವೇಕರ, ಗೌರವ ಅಧ್ಯಕ್ಷ ರಾಘವೇಂದ್ರ ವೆರ್ಣೆಕರ, ಉಪಾಧ್ಯಕ್ಷ ಉದಯ ವೆರ್ಣೆಕರ, ಕಾರ್ಯದರ್ಶಿ ಸಂಜೀವ ಪುತ್ಲೇಕರ, ಸಹ ಕಾರ್ಯದರ್ಶಿ ಮಾರುತಿ ರೇವಣಕರ, ಖಜಾಂಚಿ ವೆಂಕಟೇಶ ಕುರಡೆಕರ, ಸಹ ಖಜಾಂಚಿ ಮಂಜುನಾಥ ಸಾಮನೇಕರ, ನಿರ್ದೇಶಕರಾದ ಪುನೀತ ಶೇಟ್, ಗಿರೀಶ ರೇವಣಕರ, ಮನೋಜ ರಾಯ್ಕರ, ಸಂಘದ ಮಾಜಿ ಅಧ್ಯಕ್ಷ ಕುಂದನ ವೆರ್ಣೆಕರ ಮತ್ತು ದೈವಜ್ಞ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ವಿನೋದ ರೇವಣಕರ , ರಾಜೇಶ ಗಾಂವಕರ ಉಪಸ್ಥಿತರಿದ್ದರು.