ಜಿಲ್ಲೆ

ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ

ಜಗದೀಶ ಹೊಂಬಳಿ

ಬೆಳಗಾವಿ: ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ತೆರಳುವ ಭಕ್ತರಿಗೆ ವಿಶೇಷ ದರ್ಶನದ ಶುಲ್ಕ ಕಡಿಮೆಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕೊಲ್ಹಾಪುರ ರೇಣುಕಾ ಯಲ್ಲಮ್ಮ ದೇವಿ ಭಕ್ತರ ಸಂಘಟನೆ ಸದಸ್ಯರು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಪ್ರತಿ ವರ್ಷ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ಸಾವಿರಾರು ಭಕ್ತರು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಆಗಮಿಸುತ್ತೇವೆ. ಈ ಬಾರಿಯು ಡಿಸೆಂಬರ್‌ನಲ್ಲಿ ನಡೆಯುವ ಜಾತ್ರೆಗೆ ಬರುತ್ತಿದ್ದೇವೆ. ಯಾತ್ರಿ ನಿವಾಸದ ವರೆಗೆ ನಮ್ಮ ವಾಹನಗಳಿಗೆ ಅನುಮತಿ ನೀಡಬೇಕು. ವಿಶೇಷ ದರ್ಶನದ ಶುಲ್ಕವನ್ನು ಕಡಿಮೆಗೊಳಿಸಬೇಕು, ಯಾತ್ರಿ ನಿವಾಸದ ಕೊಠಡಿಗಳನ್ನು ಸ್ವಚ್ಛವಾಗಿರಸಬೇಕು, ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಮಹಿಳಾ ಭಕ್ತಾದಿಗಳ ಸಂಖ್ಯೆ ಹೆಚ್ಚಿರುವುದರಿಂದ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಸುಭಾಷ ಜಾಧವ, ಅಚ್ಯುತ್‌ರಾವ ಸಾಳುಂಕೆ, ಕೇಶವ ಮಾನೆ, ಮೋಹನ ಸಾಳುಂಕೆ, ಗಜಾನನ ವಿಭೂತಿ, ಸರದಾರ ಜಾಧವ, ತಾನಾಜಿ ಚೌವ್ಹಾಣ, ಶಾಲಿನಿತಾಯಿ ಸರ್‌ನಾಯಕ, ತಲಾದೇವಿ ಸೋಮವಂಶಿ ಇತರರಿದ್ದರು.