ಗುಳೇದಗುಡ್ಡದ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಸಚಿವ ವಿ.ಸೋಮಣ್ಣ ಅವರಿಗೆ ಭೆಟ್ಟಿಯಾಗಿ ಮನವಿ ಸಲ್ಲಿಸಿದರು. 
ಜಿಲ್ಲೆ

ಹೈದ್ರಾಬಾದ್ ರೈಲು ಬಾಗಲಕೋಟೆಯವರಿಗೆ ವಿಸ್ತರಿಸಲು ಮನವಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಬಾಗಲಕೋಟೆಯಿಂದ ಹೈದರಾಬಾದ್‌ದಲ್ಲಿ ಹೆಚ್ಚಿನ ವ್ಯಾಪಾರ, ವ್ಯವಹಾರ ನಡೆಯುತ್ತಿದ್ದು ವಿಜಯಪುರ - ಹೈದರಾಬಾದ ರೈಲನ್ನು ಇನ್ನು ಮುಂದೆ ಬಾಗಲಕೋಟೆವರೆಗೆ ವಿಸ್ತರಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ಶಾಸಕ ರಾಜಶೇಖರ ಶೀಲವಂತ ಮನವಿ ಮಾಡಿದ್ದಾರೆ.

ಈ ಬಗ್ಗೆ ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಇತ್ತೀಚೆಗೆ ಭೆಟ್ಟಿಯಾಗಿ ಮನವಿ ಪತ್ರ ಸಲ್ಲಿಸಿದ್ದು, ವಿಜಯಪುರ-ಹೈದರಾಬಾದ ರೈಲನ್ನು ರೈಲು ನಂ.17029 ವಿಜಯಪುರದಿಂದ ಸಂಜೆ 7.20 ಹೈದರಾಬಾದನ್ನು ಮರುದಿನ ಬೆಳಿಗ್ಗೆ ಸಮಯ ಬೆಳಿಗ್ಗೆ ಸಮಯ 7.10ಕ್ಕೆ ತಲುಪುತ್ತದೆ.

ಬಾಗಲಕೋಟೆ ಮತ್ತು ಮತ್ತು ಹೈದರಾಬಾದ್ ನಡುವೆ ವ್ಯಾಪಾರ, ವ್ಯವಹಾರ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಜನ ದೊಡ್ಡ ಸಂಖ್ಯೆಯಲ್ಲಿ ಹೈದರಾಬಾದಿಗೆ ಓಡಾಡುತ್ತಾರೆ. ಆದ್ದರಿಂದ ಈ ರೈಲನ್ನು ಬಾಗಲಕೋಟೆವರೆಗೆ ವಿಸ್ತರಿಸಲು ಸಂಬಂಸಿದ ಅಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.