ಜಿಲ್ಲೆ

ಅಡ್ಪಂಗಾಯಕ್ಕೆ ಬಸ್ ವಿಸ್ತರಿಸಲು ಮನವಿ

Avinash R

ಸುಳ್ಯ: ಸುಳ್ಯದಿಂದ ಮಂಡೆಕೋಲು ಗ್ರಾಮದ ಪೇರಾಲು ತನಕ ಬರುವ ಕೆಎಸ್ಸಾರ್ಟಿಸಿ ಬಸ್ಸನ್ನು ಅಡ್ಪಂಗಾಯ ತನಕ ವಿಸ್ತರಿಸುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎ.ಬಿ.ಅಬ್ಬಾಸ್ ನೇತೃತ್ವದಲ್ಲಿ ಸುಳ್ಯ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು.

ಸುಳ್ಯ-ಅಡ್ಕಾರು ಮಾರ್ಗವಾಗಿ ಪೇರಾಲಿಗೆ ಬಂದು ತಿರುಗಿ ಹೋಗುವ ಕೆಸ್ಸಾರ್ಟಿಸಿ ಬಸ್ಸನ್ನು ಪೇರಾಲಿನಿಂದ ಕುಂಟಿಕಾನ, ಇರುವಂಬಳ್ಳ, ಬಯಂಬು ಮಾರ್ಗವಾಗಿ ಅಡ್ಪಂಗಾಯ ತನಕ ವಿಸ್ತರಿಸಿ ಅದೇ ಮಾರ್ಗದಲ್ಲಿ ಹಿಂತಿರುಗುವಂತೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ನಗರ ಪಂಚಾಯಿತಿ ಸದಸ್ಯ ಶರೀಫ್ ಕಂಠಿ, ಸ್ಥಳೀಯರಾದ ದೀಪಕ್, ನವೀನ್, ಸುಂದರ ಮತ್ತಿತರರಿದ್ದರು.