ಜಿಲ್ಲೆ

ಸೇವಾ ಭದ್ರತೆ ಕಲ್ಪಿಸಲು ಅತಿಥಿ ಶಿಕ್ಷಕರ ಮನವಿ

ಹಳಿಯಾಳ: ರಾಜ್ಯದ ಎಲ್ಲ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಾಲೂಕಿನ ಅತಿಥಿ ಶಿಕ್ಷಕರು ತಹಸೀಲ್ದಾರ್ ಜಿ.ಕೆ. ರತ್ನಾಕರ್ ಅವರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಕಳೆದ 11-12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ ಸೇರಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ ಸರ್ಕಾರ ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ದೊರಕಿಸಿಲ್ಲ. ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಸೇವಾ ಹಿರಿತನ ಪರಿಗಣಿಸಿ ಮೊದಲ ಆದ್ಯತೆ ಕೊಡುವುದು ಮತ್ತು ಮೆರಿಟ್ ಪದ್ಧತಿ ತೆಗೆದು ಹಾಕಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅತಿಥಿ ಶಿಕ್ಷಕರ ಸಂಘದ ಹನುಮಂತ ಎಚ್.ಎಸ್, ಚಿತ್ರಲೇಖ ಕೆ., ಸುಬ್ರಮಣ್ಯ, ಗಂಗಾಧರ ಕಟ್ಟೆಕಾರ, ಬಸವರಾಜ ಕರಡಿಗುಡ್ಡ, ಬಾಲರಾಜ ಕೆ, ತಿಪ್ಪಣ್ಣ ಹತ್ತಿಗುಡೂರು ಇತರರು ಇದ್ದರು.