ಜಿಲ್ಲೆ

ಕೃಷಿ ಕಾಯ್ದೆ ವಾಪಸು ಪಡೆಯಲು ಆಗ್ರಹ

Dharwad

ಧಾರವಾಡ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೃಷಿಗೆ ಸಂಬಂಧಿಸಿದ ಮೂರೂ ಕಾನೂನುಗಳು ರೈತ ವಿರೋಧಿಯಾಗಿವೆ. ಕಾನೂನು ಹಿಂಪಡೆಯುವಂತೆ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಕೇಂದ್ರ ಸರ್ಕಾರ ಕಿಮ್ಮತ್ತು ನೀಡದೆ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ರೈತರನ್ನು ಖಾಸಗಿ ಕಂಪನಿಗಳ ಜೀತದಾಳುಗಳನ್ನಾಗಿ ಮಾಡುವ ಕಾಯ್ದೆಗಳನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿಪತ್ರ ರವಾನಿಸಿದರು.

ಸಂಘಟನೆ ಅಧ್ಯಕ್ಷ ಬಾಬಾಗೌಡ ಪಾಟೀಲ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ರೈತ ಮುಖಂಡರಾದ ಶಿವಾನಂದ ಹೊಳೆಹಡಗಲಿ, ಶಂಕರಪ್ಪ ಅಂಬಲಿ, ಮಹಾಂತೇಶ ರಾಹುತ್, ಬೈಲಪ್ಪ ದಳವಾಯಿ, ಉಳವಪ್ಪ ಒಡೆಯರ, ನಿಂಗಪ್ಪ ನಂದಿ, ಗಂಗಾಧರ ಪಾಟೀಲ ಕುಲಕರ್ಣಿ, ಮಲ್ಲಿಕಾರ್ಜುನ ಹಡಪದ, ಭೀಮಪ್ಪ ಕಾಸಾಯಿ, ಚನ್ನಬಸಪ್ಪ ಮಸೂತಿ, ಮಲ್ಲನಗೌಡ ಪಾಟೀಲ, ಶಿವಪ್ಪ ವಿಜಾಪುರ, ಶಿದ್ಲಿಂಗಪ್ಪ ಮಾಳಣ್ಣವರ, ಶಂಕರಗೌಡ ಪಾಟೀಲ, ಮಂಜುನಾಥ ಚಂಡೂನವರ, ಮಂಜುನಾಥ ಹುಬ್ಬಳ್ಳಿ, ಭೀಮಪ್ಪ ಬಡಿಗೇರ, ಧಾರವಾಡ ಹಾಗೂ ಬೆಳಗಾವಿ ಘಟಕದ ಪದಾಧಿಕಾರಿಗಳು, ಜೆಡಿಎಸ್​ನ ಗುರುರಾಜ ಹುಣಸಿಮರದ, ಕಾಂಗ್ರೆಸ್​ನ ಪಿ.ಎಚ್. ನೀರಲಕೇರಿ, ಇತರರು ಇದ್ದರು.

ಕೃಷಿ ಸಚಿವರನ್ನು ವಜಾಗೊಳಿಸಲಿ

ರೈತರ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಹಗುರವಾಗಿ ಮಾತನಾಡುವುದು ಸರಿಯಲ್ಲ. ಹಸಿರು ಶಾಲು ಹಾಕಿಕೊಂಡು ರೈತರ ಪರ ಎಂದು ನಾಟಕವಾಡುತ್ತಿದ್ದಾರೆ. ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಕೃಷಿ ಸಚಿವರನ್ನು ಕೂಡಲೆ ವಜಾ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಆಗ್ರಹಿಸಿದರು.

EndFragment