ಜಿಲ್ಲೆ

ಸುಸ್ತಿ ಸಾಲ ಮರುಪಾವತಿಸಲು ಮನವಿ

ಮರಿದೇವ ಹೂಗಾರ

ಹುಬ್ಬಳ್ಳಿ: ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪನಾ ದಿನ ನಿಮಿತ್ತ ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಸ್ಥರ ಆತ್ಮನಿರ್ಭರ ನಿಧಿ (ಪಿಎಂ-ಸ್ವಾನಿಧಿ) ಯೋಜನೆಯ ಫಲಾನುಭವಿಗಳಿಗೆ ಸಾಲ ವಿತರಣಾ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.

ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವಡ್ಡೆ ಶ್ರೀಹರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಸಾಲ ಸೌಲಭ್ಯ ಪಡೆಯುವ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು. ಸುಸ್ತಿ ಸಾಲ ಇದ್ದರೆ ಮರು ಪಾವತಿ ಮಾಡಬೇಕು ಎಂದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್​ನ ಮುಖ್ಯ ವ್ಯವಸ್ಥಾಪಕ ಎನ್.ಜಿ. ಪ್ರಭುದೇವ ಮಾತನಾಡಿ, ಕೇಂದ್ರ ಸರ್ಕಾರದ ಮೈ ಭೀ ಡಿಜಿಟಲ್ ಪ್ರಚಾರದಡಿಯಲ್ಲಿ ಅರ್ಹ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ವಹಿವಾಟಿನಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಬ್ಯಾಂಕ್​ಗಳು ಅಗತ್ಯ ಕ್ರಮ ಜರುಗಿಸಬೇಕು. ಖಾತೆಗೆ ಸಿಗುವ ಕ್ಯಾಷ್ ಬ್ಯಾಂಕ್ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

260 ಫಲಾನುಭವಿಗಳಿಗೆ 31.90 ಲಕ್ಷ ರೂ. ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು.

ಪಾಲಿಕೆಯ ಮಿಷನ್ ಮ್ಯಾನೇಜರ್ ಅಬ್ದುಲ್ ರಜಾಕ್ ಗಡವಾಲೆ, ನಲ್ಮ್ ಸಮುದಾಯ ವ್ಯವಹಕಾರಗಳ ಅಧಿಕಾರಿ ವಿದ್ಯಾ ಪಾಟೀಲ ಇತರರು ಇದ್ದರು.