ಜಿಲ್ಲೆ

ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಮನವಿ

ಜಿ.ಹೆಚ್. ಧನ್ಯಕುಮಾರ್

ಆಲ್ದೂರು: ರಾಜ್ಯಹೆದ್ದಾರಿ-27 ರಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ

ಸದಸ್ಯರು ಹಾಗೂ ಶಿಕ್ಷಕರು ಶಾಸಕಿ ನಯನ ಮೊಟಮ್ಮ ಅವರನ್ನು ಭೇಟಿ ಮಾಡಿ ಶಾಲೆ ಕುಂದು

ಕೊರತೆಗಳ ಬಗ್ಗೆ ಮಾಹಿತಿ ನೀಡಿದರು.

1930ರಲ್ಲಿ ಶಾಲೆಯನ್ನು ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಿಸಿ 95 ವರ್ಷಗಳಾಗಿವೆ.ಕಟ್ಟಡದ

ಮೇಲ್ಛಾವಣಿಯ ಹಂಚುಗಳು ಹೊಡೆದು ಮಳೆ ಬಂದ ಕೊಠಡಿ ಸೋರುತ್ತಿದೆ. ಶಾಲೆಯಲ್ಲಿ 130

ವಿದ್ಯಾರ್ಥಿಗಳಿದ್ದು ಪಾಠ ಕೇಳಲು ತೊಂದರೆಯಾಗುತ್ತಿದೆ. ಶಾಲೆ ಮೆಲ್ಛಾವಣಿ ಕುಸಿದು ಬೀಳುವ

ಹಂತಕ್ಕೆ ತಲುಪಿದೆ. ಆದ್ದರಿಂದ ತಕ್ಷಣ ಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಎಂದು

ಶಾಸಕರಿಗೆ ಮನವಿ ಸಲ್ಲಿಸಿದರು.

ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಬರುವ ಸಮಯಕ್ಕೆ ಶಾಲೆ ಇಂಜನಿಯರ್‌ಗಳು ಬಂದು

ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಸಮಸ್ಯೆಗೆ ಸ್ಪಂದಿಸಿದ

ಶಾಸಕಿ ನಯನ ಮೊಟಮ್ಮ ಅವರ ಕೆಲಸಕ್ಕೆ ಶಾಲೆ ಎಸ್‌ಡಿಎಂಸಿ ಸಮಿತಿ ಸದಸ್ಯರು ಸಂತಸ

ವ್ಯಕ್ತಪಡಿಸಿದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್,ಉಪಾಧ್ಯಕ್ಷೆ ಸವಿತಾ, ಮುಖ್ಯಶಿಕ್ಷಕಿ ಕಮಲಾಕ್ಷಿ

ಸದಸ್ಯರಾದ ಉಮೇಶ್,ಪ್ರಮೋದ್, ಸತೀಶ್, ಅಸ್ೀ, ತಾರ, ಲೀಲಾವತಿ, ಪಾಲಕ ಹರೀಶ್,

ಹಳೆಯ ವಿಧ್ಯಾರ್ಥಿ ರವಿಕುಮಾರ್ ಇದ್ದರು.