ಮುಂಡರಗಿ: ಹೊಸ ಮೊಬೈಲ್ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರ ಸಂಘದ ವತಿಯಿಂದ ಸೋಮವಾರ ಸಿಡಿಪಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಮೊಬೈಲ್‌ಗಳನ್ನು ನೀಡಬೇಕು. ಟ್ಯಾಬ್‌ಗಳನ್ನು ನೀಡಿದರೆ ಸರಿಯಾಗಿ ಕೆಲಸ ನಿರ್ವಹಿಸಬಹುದು. ಅವುಗಳಿಗೆ ಅಂತರ್ಜಾಲದ ಸೌಲಭ್ಯವೂ ಇರಬೇಕು ಎಂದು ಆಗ್ರಹಿಸಿದರು.
ದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಏಕ ರೂಪದ ಸೇವಾ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಿಡಿಪಿಒ ಮಹಾದೇವ ಇಸರನಾಳ, ಮೊಬೈಲ್ ನೀಡುವ ಕುರಿತು ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಎರಡ್ಮೂರು ತಿಂಗಳಲ್ಲಿ ಹೊಸ ಮೊಬೈಲ್ ಬರಬಹುದು. ಅಲ್ಲಿವರೆಗೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಶೀಲಾ ಚಲವಾದಿ, ಉಪಾಧ್ಯಕ್ಷೆ ಅನ್ನಪೂರ್ಣ ಸಾಲಿಮಠ, ಕಾರ್ಯದರ್ಶಿ ಕಮಲಾಕ್ಷಿ ಬೀಳಗಿ, ಖಜಾಂಚಿ ನಾಗರತ್ನ ಲಕ್ಕುಂಡಿ, ಎನ್.ಎಚ್. ಹಲಗೇರಿ, ಈರಮ್ಮ ತಂಟ್ರಿ, ಎ.ಕೆ. ನಗರ, ಎ.ಎಸ್. ಹಿರೇಮಠ, ಶಿವಲೀಲಾ ಹೇಮಗಿರಿಮಠ, ಸುನೀತಾ ಜೋಳದ, ಜಿನ್ನುಭಿ ಹಣಗಿ, ಎಸ್.ಆರ್. ಹಿರೇಮಠ, ಜಯಶ್ರೀ ರಾಮನಗೌಡ, ಈರಮ್ಮ ಸಂಗಟಿ, ವಿಶಾಲಾಕ್ಷಿ ದೇವರಮನಿ, ಶೋಭಾ ಬೂದಿಹಾಳಮಠ, ಆರ್.ಎಂ. ಮುಲ್ಲಾ, ಇತರರಿದ್ದರು.