ಜಿಲ್ಲೆ

ಪ್ರವರ್ಗ 2ಎ ಗೆ ಸೇರಿಸಲು ಆಗ್ರಹ

reportermys

ಮೈಸೂರು: ಕ್ಷತ್ರಿಯ ಮರಾಠ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕೋರ್ಟ್ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟಿಸಿದರು.


ರಾಜ್ಯದಲ್ಲಿ ಸುಮಾರು 40 ಲಕ್ಷ ಮರಾಠ ಸಮುದಾಯದವರಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಮರಾಠರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಮರಾಠರಲ್ಲಿ 33 ಪಂಗಡಗಳ ಪೈಕಿ 27 ಪಂಗಡಗಳನ್ನು ಈಗಾಗಲೇ ಪ್ರವರ್ಗ 2ಎಗೆ ಸೇರಿಸಲಾಗಿದೆ. ಆದರೆ, ಮರಾಠ ಸಮಾಜವನ್ನು ಸೇರಿಸಿಲ್ಲ ಎಂದು ಕಿಡಿ ಕಾರಿದರು.

ಸರ್ಕಾರ ಇನ್ನಾದರೂ ನಮ್ಮ ಸಮುದಾಯದ ಕಡೆಗೆ ಗಮನಹರಿಸಬೇಕು. ಸಮಾಜದ ಜ್ವಲಂತ ಸಮಸ್ಯೆಗಳನ್ನು ಅರಿತು ಕೂಡಲೇ ಬಗೆಹರಿಸಬೇಕು. ಕ್ಷತ್ರಿಯ ಮರಾಠ ಜನಾಂಗದವರನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮುಖಂಡರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪರಿಷತ್ ಅಧ್ಯಕ್ಷ ಕೇಶವನಾಥರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಜಿ.ಜ್ಞಾನಪ್ರಕಾಶ್ ಪವಾರ್, ಗಣೇಶ್‌ರಾವ್, ದಿವಾಕರ್ ಕೋರೆ, ಕೃಷ್ಣೋಜಿರಾವ್ ಗಾಯಕ್ವಾಡ್, ಲೀಲಾವತಿ ಬಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.