ಜಿಲ್ಲೆ

ಆಶ್ರಯ ಯೋಜನೆಯಡಿ ಮನೆ ಮಂಜೂರಾತಿಗೆ ಮನವಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಶ್ರಯ ಯೋಜನೆಯಡಿ ಮನೆ ಮಂಜೂರಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಪತ್ರಿಕಾ ವಿತರಕರ ಸಂಘದಿ0ದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಸುಮಾರು 200 ಜನ ಪತ್ರಿಕೆಗಳನ್ನು ವಿತರಿಸುತ್ತ ಜೀವನ ನಡೆಸುತ್ತಿದ್ದಾರೆ. ದಶಕಗಳಿಂದ ಕಡಿಮೆ ಆದಾಯದಲ್ಲಿ ದುಡಿಯುತ್ತಿರುವ ಬಹುತೇಕ ವಿತರಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ರಾಜೀವ ಗಾಂಧಿ ಆಶ್ರಯ ಯೋಜನೆಯಡಿ ಅರ್ಹ ಪತ್ರಿಕಾ ವಿತರಕರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಶಿವು ಹಲಗಿ, ಪದಾಧಿಕಾರಿಗಳಾದ ಕೃಷ್ಣಾ ಕುಲಕರ್ಣಿ, ಶೇಖರ ಬೇಲೂರ, ರವಿಕುಮಾರ ಎಸ್.ಎಂ., ಶಿವರಾಮ ಶಿರಗುಪ್ಪಿ, ನಾಗರಾಜ ಕುಲಕರ್ಣಿ, ಇತರರಿದ್ದರು.